ಸ್ಯಾಂಡಲ್ ವುಡ್ ‘ಪದ್ಮಾವತಿ’ ಮೇಲಿನ ಸಿಟ್ಟನ್ನು ಕನ್ನಡಿಗರ ಮೇಲೆ ತೀರಿಸಿಕೊಂಡ ‘ರಾಗಾ’..!!

20 Jun 2019 11:34 AM | Politics
139 Report

ಸ್ಯಾಂಡಲ್ ವುಡ್ ನ ಪದ್ಮಾವತಿ ಸ್ವಲ್ಪ ದಿನಗಳಿಂದಲೂ ಕೂಡ ಕಾಣೆಯಾಗಿದ್ದಾರೆ.. ಸದಾ ಬಿಜೆಪಿಯವರನ್ನು ಕಾಲೆಳೆಯುತ್ತಿದ್ದ ರಮ್ಯಾ ಸದ್ಯ ಸಾಮಾಜಿಕ ಜಾಲತಾಣಗಳಿಂದಲೂ ದೂರ ಉಳಿದಿದ್ದಾರೆ.. ಕಾಂಗ್ರೆಸ್ ಐಟಿ ಸೆಲ್‍ನ ಮಾಜಿ ಮುಖ್ಯಸ್ಥೆ ರಮ್ಯಾ ಅವರ ಮೇಲೆ ಇದೀಗ ಗಂಭೀರ ಆರೋಪ ಕೇಳಿ ಬಂದಿದ್ದು, ಇದರ ನಡುವೆ ರಮ್ಯಾ ಮೇಲಿನ ಕೋಪಕ್ಕೆ ಐಟಿ ಸೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 20 ಮಂದಿ ಕನ್ನಡಿಗರಿಗೆ ಗೇಟ್‌ ಪಾಸ್‌ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸುಮಾರು ಕಳೆದ ಮೂರು ವರ್ಷಗಳಿಂದಲೂ ಕೂಡ ದೆಹಲಿ ಐಟಿ ಸೆಲ್‍ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಖಾಸಗಿ ವಾಹಿನಿಯೊಂದಕ್ಕೆ ಕೆಲಸ ಕಳೆದುಕೊಂಡಿರುವ ಬಗ್ಗೆ ಮಾಹಿತಿಯನ್ನುನೀಡಿದ್ದಾರೆ, ಇದೇ ಸಮಯದಲ್ಲಿ ಅವರು ಲೋಕಸಭಾ ಚುನಾವಣೆ ಫಲಿತಾಂಶ ಬಳಿಕ ನಮ್ಮ ಕೆಲಸಕ್ಕೆ ತೊಂದರೆಯಾಗಿದೆ. ರಮ್ಯಾ ಕೂಡ ಈಗ ಐಟಿ ಟೀಮ್‍ನಲ್ಲಿ ಸಕ್ರಿಯವಾಗಿ ಭಾಗಿಯಾಗಿಲ್ಲ. ಇದರ ಪರಿಣಾಮವಾಗಿಯೇ ಸುಮಾರು 15 ರಿಂದ 20 ಮಂದಿ ಈಗ ವೈಯಕ್ತಿಕ ಕಾರಣಕ್ಕೆ ಕೆಲಸ ಕಳೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. . ಕೆಲಸ ಕಳೆದುಕೊಂಡಿರುವುದಕ್ಕೆ ನಾವು ಯಾರನ್ನು ಕೂಡ ದೂರುವುದಿಲ್ಲ ಎಂದರು.. ರಮ್ಯ ಕಾಂಗ್ರೆಸ್ ಐಟಿಯ ಮಾಜಿ ಮುಖ್ಯಸ್ಥೆ.. ಅವರು ಸದ್ಯ ಟೀಮ್ ನಲ್ಲಿ ಸರಿಯಾಗಿ ಭಾಗಿಯಾಗದೇ ಇರುವುದೇ ಇದಕ್ಕೆಲ್ಲಾ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ರಮ್ಯ ಸದ್ಯ ಎಲ್ಲಿಯೂ ಕೂಡ ಕಾಣಿಸಿಕೊಂಡಿಲ್ಲ.. ಮಂಡ್ಯದ ಜನರ ಹಗೆಯನ್ನು ರಮ್ಯ ಕಟ್ಟಿಕೊಂಡಿರುವುದಂತೂ ಸುಳ್ಳಲ್ಲ..

Edited By

Manjula M

Reported By

Manjula M

Comments