ಜೂನ್ 25 ರ ನಂತರ ಕಾಂಗ್ರೆಸ್ ಅಧಿಪತಿ ಇವರೇ ಅಂತೆ..!!

18 Jun 2019 12:51 PM | Politics
604 Report

ರಾಜ್ಯ ರಾಜಕಾರಣದಲ್ಲಿ ಇತ್ತಿಚಿಗೆ ಸಾಕಷ್ಟು ಬದಲಾವಣೆಗಳು ಕಂಡು ಬರುತ್ತಿವೆ.. ಅದರಲ್ಲೂ ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ಮೇಲಂತೂ ಸಾಕಷ್ಟು ಅತೃಪ್ತ ಶಾಸಕರು ಪಕ್ಷಾಂತರ ಮಾಡುತ್ತಿದ್ದಾರೆ.. ದೋಸ್ತಿ ಸರ್ಕಾರ ಇದರಿಂದ ಸಂಕಷ್ಟಕ್ಕೆ ಸಿಲುಕಿಕೊಂಡಂತೆ ಆಗಿದೆ.. ಇದೀಗ ರಾಜಕೀಯದಲ್ಲಿ ಮತ್ತೊಂದು ಬಿಸಿ ಬಿಸಿ ಸುದ್ದಿ ಚರ್ಚೆಯಾಗುತ್ತದೆ.. ರಾಜ್ಯ ರಾಜಕಾರಣದಲ್ಲಿ ಕನಸಿನ ಹುದ್ದೆ ಏರಲೇಬೇಕು ಎಂದುಕೊಂಡಿರುವ ಸಚಿವ ಡಿಕೆ ಶಿವಕುಮಾರ್ ಭವಿಷ್ಯ ಜೂನ್ 25ಕ್ಕೆ ನಿರ್ಧಾರ ಆಗಲಿದೆ ಎಂದು ಹೇಳಲಾಗುತ್ತಿದೆ.

ಹೌದು ಜೂನ್ 25ರ ಸತ್ವ ಪರೀಕ್ಷೆಯಲ್ಲಿ ಪಾಸಾದರೆ, ರಾಜ್ಯ ಕಾಂಗ್ರೆಸ್‍ಗೆ ಡಿಕೆಶಿಯೇ ಅಧಿಪತಿ ಎನ್ನುವ ಮಾತು ಕಾಂಗ್ರೆಸ್ ವಲಯದಲ್ಲಿ ಜೋರಾಗಿ ಕೇಳಿ ಬರುತ್ತಿದೆ. ಜೂನ್ 25ರಂದು ಬೆಂಗಳೂರಿನ ಜನ ಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸಚಿವ ಡಿ.ಕೆ ಶಿವಕುಮಾರ್ ಅವರ ಐಟಿ ಕೇಸ್‍ಗೆ ಸಂಬಂಧಿಸಿದ ದೂರೊಂದರ ತೀರ್ಪು ಪ್ರಕಟವಾಗಲಿದೆ. ತೀರ್ಪು ಡಿ.ಕೆ ಶಿವಕುಮಾರ್ ಪರವಾಗಿ ಬಂದರೆ ಅವರಿಗೆ ದೊಡ್ಡ ಮಟ್ಟದ ರಿಲೀಫ್ ಅವರಿಗೆ ಸಿಗಲಿದೆ. ಒಂದು ಸಾರಿ ಡಿಕೆಶಿಗೆ ಕೋರ್ಟ್ ಕೇಸಿನ ಜಂಜಾಟದಿಂದ ರಿಲೀಫ್ ಸಿಕ್ಕರೆ ಡಿಕೆಶಿ ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ಹೊರಲು ಜೈ ಎನ್ನುವ ಸಾಧ್ಯತೆ ಇದೆ ಎನ್ನಲಾಗಿದೆ.. ಒಟ್ಟಾರೆಯಾಗಿ ಜೂನ್ 25 ರ ನಂತರ ಕಾಂಗ್ರೆಸ್ ನ ಅಧಿಪತಿ ಇವರೇ ಆಗಲಿದ್ದಾರಂತೆ.. ಡಿಕೆ ಶಿವಕುಮಾರ ಅದೃಷ್ಟ ಹೇಗಿದೆ ಎಂಬುದನ್ನ ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments