ತುಮಕೂರಿನಲ್ಲಿ ಸೋತ ದೇವೆಗೌಡರು ಹೇಳಿದ್ದೇನು ಗೊತ್ತಾ..?

17 Jun 2019 5:49 PM | Politics
761 Report

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಅಖಾಡದಿಂದ ಹೆಚ್ ಡಿ ದೇವೆಗೌಡರು ಸ್ಪರ್ಧಿಸಿದ್ದರು,  ಆದರೆ ಜಯ ಗಳಿಸುವಲ್ಲಿ ವಿಫಲವಾದರು.. ಇದೀಗ ಅವರ ಸೋಲಿಗೆ ಕಾರಣ ಕಾಂಗ್ರೆಸ್ ನಾಯಕರು ಎನ್ನಲಾಗುತ್ತಿತ್ತು.. ಆದರೆ ಇದನ್ನು ಸ್ವತಃ ದೇವೆಗೌಡರೇ ಅಲ್ಲಗಳೆದಿದ್ದಾರೆ..  

ಆದರೆ ಇದೀಗ ತುಮಕೂರಿನಲ್ಲಿ ಹೆಚ್​.ಡಿ ದೇವೇಗೌಡ ಅವರ ಸೋಲಿಗೆ ಕಾಂಗ್ರೆಸ್ ನಾಯಕರು ಕಾರಣ ಅನ್ನೋ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹಾಗೇ ಯಾರು ಹೇಳಬಾರದು. ಎಲ್ಲರೂ ಕೂಡ  ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು. ಸುದ್ದಿಗಾರರ ಜೊತೆ ಮಾತನಾಡಿದ ದೇವೆಗೌಡರು ಹಾಗೇ ಒಬ್ಬರ ಮೇಲೆ ಸೋಲು ಹಾಕೋದು ಸರಿಯಲ್ಲ. ನಾನು ಸೋತೆ ಅಂತ ಕುಳಿತುಕೊಂಡಿಲ್ಲ ನನ್ನ ಕೆಲಸಗಳನ್ನು ನಾನು ಮಾಡುತ್ತಿದ್ದೇನೆ ಯಾರ ಮೇಲೂ ಯಾರು ಕೂಡ ದೂರುವ ಪ್ರಮೇಯ ಇಲ್ಲ ಎಂದರು.

Edited By

Manjula M

Reported By

Manjula M

Comments