ನಿಖಿಲ್ ಕುಮಾರಸ್ವಾಮಿ ಮೇಲೆ ಬಿಜೆಪಿ ಆಕ್ರೋಶ..!! ಕಾರಣವೇನು ಗೊತ್ತಾ..?

15 Jun 2019 12:07 PM | Politics
3504 Report

ರಾಜಕೀಯದಲ್ಲಿ ವಾದ ಪ್ರತಿವಾದಗಳಿಗೇನು ಕಡಿಮೆ ಇಲ್ಲ… ಉತ್ತರಗಳಿಗೆ ಪ್ರತ್ಯುತ್ತರಗಳು, ಟಾಂಗ್ ಕೊಡುವುದು ಕೂಡ ಕಾಮನ್… ಹಾಗಾಗಿಯೇ ಈಗಾಗಲೇ ರಾಜಕೀಯದಲ್ಲಿ ಅಸಮಾಧಾನದ  ವಾತಾವರಣ ಸೃಷ್ಟಿಯಾಗಿದೆ.. ಮಂಡ್ಯ ಅಖಾಡದಿಂದ ನಿಖಿಲ್ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಪರಾಭವಗೊಂಡಿದ್ದರು… ಇದೀಗ ನಿಖಿಲ್ ಬೆಂಬಲಿಗರು ಮಾಡಿರುವ ಕೆಲಸಕ್ಕೆ  ಬಿಜೆಪಿ ಪಕ್ಷದವರು ನಿಖಿಲ್ ಮೇಲೆ ಆಕ್ರೋಶ ಪಡುತ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿ ಬೆಂಬಲಿಗರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಮಗ ವಿಜಯೇಂದ್ರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದು, ಇದೀಗ ಈ ಪೋಸ್ಟ್‌ಗೆ ಬಿಜೆಪಿ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಜಿಂದಾಲ್ ಕಂಪನಿಗೆ ಸರ್ಕಾರಿ ಭೂಮಿ ಲೀಸ್ ವಿರೋಧಿಸಿ ಯಡಿಯೂರಪ್ಪ ನೇತೃತ್ವದಲ್ಲಿ ಧರಣಿ ಮಾಡುತ್ತಿದ್ದಾರೆ. ಅಹೋರಾತ್ರಿ ಧರಣಿ ಹಿನ್ನೆಲೆಯಲ್ಲಿ ಪ್ರತಿಭಟನಾ ಸ್ಥಳದಲ್ಲೇ ಬಿಎಸ್‍ವೈ ಮತ್ತು ಮಗ ವಿಜಯೇಂದ್ರ ಮಲಗಿದ್ದರು. ಆ ಫೋಟೋವನ್ನ ಕುಮಾರಸ್ವಾಮಿ ಬೆಂಬಲಿಗರು ಸ್ಟೇಟಸ್ ಹಾಕಿಕೊಂಡು ಬರೆದುಕೊಂಡಿದ್ದಾರೆ.  ‘ಕುಮಾರಣ್ಣ ಹೇಳಿದ್ದರು ನಾನು ಅಧಿಕಾರಕ್ಕೆ ಬಂದರೆ ಕಳ್ಳನ್ನ, ಕಳ್ಳನ ಮಗನನ್ನು ಬೀದಿಯಲ್ಲಿ ಮಲಗಿಸುತ್ತೇನೆ. ಈಗ ಅದನ್ನ ಮಾಡಿ ತೋರಿಸಿದ್ದಾರೆ’ ಎಂದು ಫೇಸ್‍ಬುಕ್ ಸ್ಟೇಟಸ್ ಹಾಕಿದ್ದಾರೆ. ನಿಖಿಲ್ ಕುಮಾರಸ್ವಾಮಿ ಸಪೋಟರ್ಸ್ ಹೆಸರಿನ ಫೇಸ್‍ಬುಕ್ ಅಕೌಂಟ್‍ನಿಂದ ಈ ಪೋಸ್ಟ್ ಮಾಡಲಾಗಿದೆ. ಇದೀಗ ಈ ಪೋಸ್ಟ್ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಒಟ್ಟಾರೆಯಾಗಿ ಯಾರೋ ಮಾಡಿದ ತಪ್ಪಿಗೆ ಇನ್ನಾರಿಗೋ ಶಿಕ್ಷೆ ಎನ್ನುವಂತೆ ನಿಖಿಲ್ ಬೆಂಬಲಿಗರು ಮಾಡಿದ ಕೆಲಸಕ್ಕೆ ಬಿಜೆಪಿಯವರು ನಿಖಿಲ್ ವಿರುದ್ದ ಕಿಡಿಕಾರುವಂತೆ ಆಗಿದೆ… ಆದ್ದರಿಂದ ಬಿಜೆಪಿ ಯ ಬಗ್ಗೆ ಮತ್ತೆ ಯಾವ ರೀತಿಯ ಪ್ರತ್ಯುತ್ತರ ಕೊಡುತ್ತಾರೋ ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments