ಸುಮಲತಾ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸುವಂತ ಹೇಳಿಕೆ ಕೊಟ್ಟ ಜೆಡಿಎಸ್ ಶಾಸಕ..!!

10 Jun 2019 2:52 PM | Politics
9368 Report

 ಮಂಡ್ಯ ಲೋಕಸಭಾ ಅಖಾಡದಿಂದ ಗೆದ್ದು ಬೀಗುತ್ತಿರುವ ಸುಮಲತಾ ಅಂಬರೀಶ್ ಅವರ ಮೇಲೆ ಇದೀಗ ಸಾಕಷ್ಟು ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ.. ಮೊನ್ನೆ ಮೊನ್ನೆಯಷ್ಟೆ ಡಿಸಿ ತಮ್ಮಣ್ಣ ಮೇಲೆ ಗರಂ ಆಗಿದ್ದರು.. ಜನರ ಪರ ಕೆಲಸ ಮಾಡಲಿ. ಇಲ್ಲ ಅಂದ್ರೆ ರಾಜೀನಾಮೆ ಕೊಡಲಿ ಎಂದಿದ್ದರು.. ಇದಕ್ಕೆ ಜೆಡಿಎಸ್ ನಾಯಕರ ಕೆಂಗಣ್ಣಿಗೆ ಸುಮಲತಾ ಗುರಿಯಾದರು..  ಇದೀಗ ಅವರ ಈ ಹೇಳಿಕೆಗೆ ಜೆಡಿಎಸ್ ರಾಜ್ಯ ವಕ್ತಾರ ರಮೇಶ್ ಬಾಬು ಪ್ರತಿಕ್ರಿಯೆ ನೀಡಿದ್ದಾರೆ.

ಮಂಡ್ಯದ ನೂತನ ಸಂಸದೆ ಸುಮಲತಾ ಅಂಬರೀಷ್‌ ಅವರು ಬಿಜೆಪಿಯನ್ನು ಮೆಚ್ಚಿಸಲು ಅಥವಾ ರಾಜಕೀಯ ನೆಲೆಗಾಗಿ ಪರಿತಪಿಸುತ್ತಿರುವ ಕೆಲವು ನಾಯಕರನ್ನು ಖುಷಿಪಡಿಸಲು ನಮ್ಮ ಪಕ್ಷ ಇಲ್ಲವೇ ನಮ್ಮ ನಾಯಕರನ್ನು ಟೀಕಿಸುವ ಪ್ರಯತ್ನ ಮಾಡಿದರೆ ಅದನ್ನು ಬಯಲು ಮಾಡುವ ಮತ್ತು ರಾಜಕೀಯವಾಗಿ ಉತ್ತರಿಸುವ ಶಕ್ತಿ ಪಕ್ಷ ಹಾಗೂ ಕಾರ್ಯಕರ್ತರಿಗೆ ಇದೆ ಎಂದು ಜೆಡಿಎಸ್‌ ರಾಜ್ಯ ವಕ್ತಾರ ರಮೇಶ್‌ ಬಾಬು ಪ್ರತಿಕ್ರಿಯಿಸಿದ್ದಾರೆ.  ಮಂಡ್ಯದ ಸಂಸದರಾಗಿ ಆಯ್ಕೆಯಾಗಿ ಇನ್ನೂ ಎರಡು ವಾರಗಳು ಕೂಡ ಕಳೆದಿಲ್ಲ.. ಆಗಲೇ ರಾಜಕೀಯ ಪ್ರೇರೆಪಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮದ್ದೂರು ಕ್ಷೇತ್ರದ ಶಾಸಕರಾದ ಡಿ.ಸಿ. ತಮ್ಮಣ್ಣ ಅವರು ತಮ್ಮ ಕ್ಷೇತ್ರದ ಜನರೊಂದಿಗೆ ಹಂಚಿಕೊಂಡ ಭಾವನೆಗಳಿಗೆ ಸಂಸದೆ ಸುಮಲತಾ ಅವರು ದರ್ಪದ ಟೀಕೆ ಮಾಡುವುದರ ಜೊತೆಗೆ ರಾಜೀನಾಮೆ ನೀಡಲು ಕೇಳಿದ್ದಾರೆ.. ಇವೆಲ್ಲವೂ ಕೂಡ ಸರಿ ಕಾಣಿಸುವುದಿಲ್ಲ… ಮಂಡ್ಯದ ಸೋಲನ್ನು ನಾವೆಲ್ಲ ಒಪ್ಪಿಕೊಂಡಿದ್ದೇವೆ.. ರಾಜಕಾರಣ ನಮಗೆ ಫ್ಯಾಷನ್‌ ಅಲ್ಲ. ಸಂವಾದದ ಮೂಲಕ ಜನರ ನಾಡಿ ಮಿಡಿತ ಅರಿಯುವುದು ಶಾಸಕರ ಕೆಲಸ. ಅದಕ್ಕೆ ಯಾರ ಅಪ್ಪಣೆಯೂ ಅನುಮೋದನೆಯೂ ಬೇಕಿಲ್ಲ. ರಾಜಕೀಯದ ಪಕ್ಷದ ಜವಬ್ದಾರಿಯಾಗಿ ನಾವು ಕೂಡ ಕೆಲಸ ಕಾರ್ಯಗಳಲ್ಲಿ ಕೈ ಜೋಡಿಸುತ್ತೇವೆ.. ಅದನ್ನು ಬಿಟ್ಟು ಅವರು ಹೀಗೆಲ್ಲಾ ಮಾತನಾಡುವುದು ಸರಿಯಲ್ಲ ಎಂದರು…

Edited By

Manjula M

Reported By

Manjula M

Comments