ಕಾಂಗ್ರೆಸ್ ಸಚಿವರ ಪ್ರತಿಮೆ ಸ್ಥಾಪನೆಗೆ ಮುಂದಾದ `ಜೆಡಿಎಸ್ ಶಾಸಕ'..!

10 Jun 2019 9:21 AM | Politics
2000 Report

ರಾಜಕೀಯ ವಲಯದಲ್ಲಿ ಸಾಕಷ್ಟು ಸುದ್ದಿಗಳು ಪದೇ ಪದೇ ಚರ್ಚೆಯಾಗುತ್ತಲೇ ಇರುತ್ತವೆ.. ಒಂದಿಲ್ಲ ಒಂದು ಕುತೂಹಲ ಕೆರಳಿಸುವ ಸುದ್ದಿಗಳು ನಡೆಯುತ್ತಲೆ ಇರುತ್ತವೆ.ಇದೀಗ ಮತ್ತೊಂದು ಕುತೂಹಲ ಮೂಡಿಸುವ ಸುದ್ದಿಯೊಂದು  ನಡೆದಿದೆ. ಜೆಡಿಎಸ್ ಶಾಸಕ ಡಾ. ದೇವಾನಂದ ಎಫ್. ಚವ್ಹಾಣ್ ಅವರು ಗೃಹ ಸಚಿವ ಎಂ.ಬಿ.ಪಾಟೀಲ್ ಅವರ ಪ್ರತಿಮೆ ಸ್ಥಾಪನೆ ಮಾಡುವುದಾಗಿ ಘೋಷಿಸಿ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದ್ದಾರೆ.  ಈ  ಮಾತು ರಾಜಕೀಯ ವಲಯದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ.

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗೊಲಗೇರಿಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಅವರ ಪ್ರತಿಮೆ ಸ್ಥಾಪಿಸಲಾಗಿದೆ. ಅದೇ ರೀತಿ ಗೃಹ ಸಚಿವ ಎಂ.ಬಿ.ಪಾಟೀಲ್ ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ಬರದ ಬೀಡಾಗಿದ್ದ ವಿಜಯಪುರ ಜಿಲ್ಲೆಯಲ್ಲಿ ಸಾಕಷ್ಟು ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಗಮನ ಸೆಳೆದಿದ್ದಾರೆ. ಹಾಗಾಗಿ ಅವರ ಕೊಡುಗೆ ಜಿಲ್ಲೆಗೆ ತುಂಬಾ ಅಪಾರವಾಗಿದೆ.. ಹಾಗಾಗಿ ಅವರ ಪ್ರತಿಮೆಯನ್ನು ಕೂಡ ಸ್ಥಾಪಿಸಬೇಕು ಎಂದರು. ತಮ್ಮ ರಾಜಕೀಯ ಗುರುಗಳೂ ಆಗಿರುವ ಎಂ.ಬಿ.ಪಾಟೀಲ್ ಅವರ ಪ್ರತಿಮೆಯನ್ನು ಸ್ಥಾಪಿಸುವುದಾಗಿ ಜೆಡಿಎಸ್ ಶಾಸಕ ದೇವಾನಂದ್ ಜವ್ಹಾಣ ತಿಳಿಸಿದ್ದಾರೆ.. ಈ ಮಾತು ರಾಜಕೀಯ ವಲಯದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ..

Edited By

Manjula M

Reported By

Manjula M

Comments