ದೇವೇಗೌಡರು ಏನು ಆಕಾಶದಿಂದ ಇಳಿದು ಬಂದಿದ್ದಾರ ಎಂದಿದ್ಯಾರು..?

08 Jun 2019 11:01 AM | Politics
250 Report

ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶದಿಂದಾಗಿ ರಾಜ್ಯದಲ್ಲಿ ಮೋದಿ ಹವಾ ಹೆಚ್ಛಾಗಿದೆ.. ನರೇಂದ್ರ ಮೋದಿಯವರ ದೇಶದಲ್ಲಿ ಹೆಚ್ಚಾಗಿದೆ.. ಹೀಗಾಗಿ ಕಾಂಗ್ರೆಸ್’ಗೆ ಸ್ವಲ್ಪ ಹಿನ್ನಡೆಯಾಗಿದೆ.. ನರೇಂದ್ರ ಮೋದಿ ಹವಾ ಹಬ್ಬಿದ್ದರಿಂದ ದೇಶಾದ್ಯಂತ ಕಾಂಗ್ರೆಸ್‌ಗೆ ಸ್ವಲ್ಪ ಹಿನ್ನಡೆಯಾಗಿದೆ. ದೇವೇಗೌಡರೇನು ಆಕಾಶದಿಂದ ಇಳಿದವರೇ ಎಂಬ ಪ್ರಶ್ನೆಯನ್ನು  ಮಾಜಿ ಶಾಸಕ ಕೆ.ಎನ್‌. ರಾಜಣ್ಣ ಪ್ರಶ್ನೆ ಮುಂದಿಟ್ಟರು

ಮಾಧ್ಯಮದವರೊಂದಿಗೆ  ಮಾತನಾಡಿದ ರಾಜಣ್ಣ ಮಾಜಿ ಪ್ರಧಾನಮಂತ್ರಿ ಎಚ್‌.ಡಿ. ದೇವೇಗೌಡರ ಸೋಲನ್ನೇ ಏಕೆ ದೊಡ್ಡದು ಮಾಡುತ್ತಿದ್ದೀರಿ. ಕೋಲಾರದಲ್ಲಿ ಕೆ.ಎಚ್‌. ಮುನಿಯಪ್ಪ ಸೋತಿಲ್ಲವೇ? ಮಲ್ಲಿಕಾರ್ಜುನ ಖರ್ಗೆಯವರು ಸೋತಿಲ್ಲವೇ? ವೀರಪ್ಪ ಮೊಯ್ಲಿ ಅವರು ಸೋತಿಲ್ಲವೇ? ಅವರ ಸೋಲಿನ ಬಗ್ಗೆ ನೀವು ಏಕೆ ಮಾತನಾಡುತ್ತಿಲ್ಲ. ದೇವೇಗೌಡರೇನು ಆಕಾಶದಿಂದ ಇಳಿದವರೇ? ಅಥವಾ ಹಿಂದೆ ಯಾವತ್ತೂ ಅವರು ಸೋತೇ ಇಲ್ಲವೇ ಎಂದು ಪ್ರಶ್ನೆ ಮಾಡಿದರು. ನಾನು ಯಾರ ಬಗ್ಗೆಯೂ ಕೂಡ ಪ್ರಶ್ನೆ ಮಾಡುತ್ತಿಲ್ಲ… ಯಾರನ್ನು ನಿಂದಿಸುತ್ತಿಲ್ಲ… ಮೈತ್ರಿಯನ್ನು ನಾವಿಉ ಒಪ್ಪಿಕೊಂಡ ಮಾತ್ರಕ್ಕೆ ಜನತೆ ಒಪ್ಪಿಕೊಳ್ಳಬೇಕು ಅಂತೇನಿಲ್ಲ ಎಂದು ಪ್ರಶ್ನೆ ಮಾಡಿದರು.ಇದಕ್ಕೆಲ್ಲಾ ಕಾರಣ ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶ... ಬಿಜೆಪಿಯು ಸ್ಪಷ್ಟ ಮತಗಳಿಂದ ವಿಜಯಶಾಲಿಯಾಗಿ ಹೊರಹೊಮ್ಮಿದೆ.

Edited By

Manjula M

Reported By

Manjula M

Comments