ಹೆಚ್.ಡಿ.ರೇವಣ್ಣ ಸಚಿವನಾಗಲು ಅನ್ ಫಿಟ್  ಎಂದ ಬಿಜೆಪಿ ಸಂಸದ..!!

07 Jun 2019 12:09 PM | Politics
618 Report

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಸ್ಪಷ್ಟ ಬಹುಮತ ಪಡೆದುಕೊಂಡಿದೆ. ತುಮಕೂರು ಲೋಕಸಭಾ ಅಖಾಡದಿಂದ ಹೆಚ್ ಡಿ ದೇವೆಗೌಡರ ವಿರುದ್ದ ಬಿಜೆಪಿ ಅಭ್ಯರ್ಥಿ ಬಸವರಾಜು ಗೆದ್ದು ಬೀಗಿದ್ದರು… ಇದೀಗ ಬಸವರಾಜು ಅವರು ಹೆಚ್ ಡಿ ರೇವಣ್ಣ ವಿರುದ್ದ ಕಿಡಿಕಾರಿದ್ದಾರೆ. ಸಚಿವನಾಗಿ ಹೆಚ್.ಡಿ.ರೇವಣ್ಣ ಅವರಿಗೆ ಒಂದು ಕೆರೆ ತುಂಬಿಸುವ ಯೋಗ್ಯತೆ ಇಲ್ಲ, ಸಚಿವನಾಗಲು ರೇವಣ್ಣ ಅವರು ಅನ್ ಫಿಟ್ ಎಂದು ತುಮಕೂರು ಸಂಸದ ಜಿ.ಎಸ್.ಬಸವರಾಜು ಕಿಡಿಕಾರಿದ್ದಾರೆ.

ಮಾಧ್ಯಮದವರೊಂದಿಗೆ ತುಮಕೂರಿನಲ್ಲಿ ಮಾತನಾಡಿದ ಜಿ.ಎಸ್. ಬಸವರಾಜು, ಅನ್ ಫಿಟ್ ಎಂಬ ಪದದ ಅರ್ಥ ರೇವಣ್ಣ ಅವರಿಗೆ ಗೊತ್ತಿಲ್ಲ ಎಂದು ಕಾಣಿಸುತ್ತದೆ. ಶಾಸಕನಾಗಿ, ಸಚಿವನಾಗಿ ಒಂದು ಕೆರೆಯನ್ನೂ ಸಹ ತುಂಬಿಸಲು ಯೋಗ್ಯತೆ ಇಲ್ಲದ ಆತ ನಿಜವಾಗಿಯೂ ಕೂಡ  ಅನ್ ಫಿಟ್ ಎಂದು ವ್ಯಂಗ್ಯವಾಡಿದ್ದಾರೆ.. ಹೇಮಾವತಿ ತುಮಕೂರಿನ ಜನರ ಕುಡಿಯುವ ನೀರಿನ ಮೂಲಾಧಾರ, ಆದರೆ ನೀರು ಹೇಗೆ ತರ್ತಿರೋ ನೋಡೋಣ ಎನ್ನುತ್ತಾರೆ,  ಓರ್ವ ಸಚಿವನಾಗಿ ಕ್ಷೇತ್ರದ ಶಾಸಕನಾಗಿ ಹೀಗೆ ಹೇಳಲು ರೇವಣ್ಣನಿಗೆ ಮರ್ಯಾದೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ರಾಜಕೀಯ ವಲಯದಲ್ಲಿ ಆರೋಪಗಳು ಪ್ರತ್ಯಾರೋಪಗಳು ಸಾಕಷ್ಟು ಕೇಳಿ ಬರುತ್ತಿರುತ್ತವೆ.. ಹಾಗಾಗಿ ರಾಜಕೀಯದಲ್ಲಿ ಮಾತನಾಡುವ ಮುನ್ನ ಯೋಚನೆ ಮಾಡಬೇಕು…

Edited By

Manjula M

Reported By

Manjula M

Comments