ದೋಸ್ತಿ ಗೆ ಕೈ ಕೊಟ್ಟು ಕಮಲ ಅರಳಿಸಲು ಮುಂದಾದ ಪ್ರಭಾವಿ ಶಾಸಕ.!!    

05 Jun 2019 12:42 PM | Politics
8230 Report

ಈ ಭಾರಿ ಲೋಕಸಭಾ ಚುನಾವಣೆಯ ಫಲಿತಾಂಶದಿಂದಾಗಿ ಎಲ್ಲವೂ ಕೂಡ ಬದಲಾಗುವಂತೆ ಕಾಣುತ್ತಿದೆ…ಸಾಕಷ್ಟು ಅತೃಪ್ತ ಶಾಸಕರು ಪಕ್ಷವನ್ನು ಬಿಟ್ಟು ಬೇರೆ ಪಕ್ಷಕ್ಕೆ ಪಕ್ಷಾಂತರಗೊಳ್ಳುತ್ತಿದ್ದಾರೆ. ಇದೀಗ ಮತ್ತೊಬ್ಬ ಕಾಂಗ್ರೆಸ್ ನ ಪ್ರಭಾವಿ ಶಾಸಕ ಬಿಜೆಪಿ ಗೆ ಸೇರಿಕೊಳ್ಳುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದ್ದಾರೆ. ಪಕ್ಷದಲ್ಲಿ ತಮ್ಮನು ಸರಿಯಾಗಿ ಯಾರು ನಡೆಸಿಕೊಳ್ಳುತ್ತಿಲ್ಲ, ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ರಾಜ್ಯದಲ್ಲಿ ಹೀನಾಯವಾಗಿ ಸೋತಿದೆ.

ಇದೆಲ್ಲದರ  ನಡುವೆ ರೋಷನ್‌ ಬೇಗ್ ಅವರು ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದ್ದು, ಕಳೆದ 10 ರಾಜ್ಯ ಸಭಾ ಸದಸ್ಯ ಎಂ.ಜೆ ಆಕ್ಪರ್‌ ಹಾಗೂ ರಾಜ್ಯದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ಇದಲ್ಲದೇ ಬಿಜೆಪಿ ಪಕ್ಷವನ್ನು ಸೇರುವುದಕ್ಕೆ ಕಾಂಗ್ರೆಸ್‌ ಶಾಸಕ ರಮೇಶ್‌ ಜಾರಕಿಹೊಳಿಯವರ ತಂಡವು ಕೂಡ ಬಿಜೆಪಿ ಸೇರುವುದಕ್ಕೆ ಮುಂದಾಗಿದೆ. ಹೀಗಾಗಿ ಎಲ್ಲರನ್ನು ಒಟ್ಟಾಗಿ ಸೇರಿಸಿಕೊಳ್ಳುವುದಕ್ಕೆ ರಾಜ್ಯ ಬಿಜೆಪಿ ಮುಂದಾಗಿದೆ ಎನ್ನಲಾಗಿದೆ. ಒಟ್ಟಾರೆಯಾಗಿ ದೋಸ್ತಿ ಜೊತೆ ಕೈ ಜೋಡಿಸಿದವೆರೆಲ್ಲಾ ಇದೀಗ ದೋಸ್ತಿ ಕೈ ಕೊಟ್ಟು ಕಮಲ ಅರಳಿಸಲು ಮುಂದಾಗುತ್ತಿದ್ದಾರೆ. ಬಿಜೆಪಿಯು ತನ್ನ ಪ್ರಾಬಲ್ಯವನ್ನು ತಮ್ಮಷ್ಟು ಬಲ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ ಎಂಬುದು ಈ ಬದಲಾವಣೆಯಿಂದ ತಿಳಿಯುತ್ತಿದೆ.

Edited By

Manjula M

Reported By

Manjula M

Comments