ಶೋಭಾ ಕರಂದ್ಲಾಜೆಗೆ ಸವಾಲು ಹಾಕಿದ ಜೆಡಿಎಸ್ ಸಚಿವ..!! ಏನಂತಾ ಗೊತ್ತಾ..?

04 Jun 2019 5:20 PM | Politics
3911 Report

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ  ಸಾಕಷ್ಟು ಬದಲಾವಣೆಗಳು ಆಗಿವೆ…ಎಲ್ಲರೂ ಮಾಜಿ ಪ್ರಧಾನಿ ದೇವೆಗೌಡರ ಕುಟುಂಬ ರಾಜಕಾರಣದ ಬಗ್ಗೆ ಮಾತ್ರ ಮಾತನಾಡಿಕೊಳ್ಳುತ್ತಿದ್ದರು.. ಅದಕ್ಕೆ ಪುಷ್ಟಿ ನೀಡುವಂತೆ ಈ ಬಾರಿ  ಲೋಕಸಭಾ ಚುನಾವಣೆಯಲ್ಲಿ ದೇವೆಗೌಡರು, ಮತ್ತು ಮೊಮ್ಮಕಳು ಅಖಾಡಕ್ಕೆ ಇಳಿದ್ದಿದ್ದರು.. ಇದಕ್ಕೆ ಪೂರಕವೆಂಬಂತೆ ದೇವೇಗೌಡರ ಕುಟುಂಬ ರಾಜಕೀಯ ನಿವೃತ್ತಿ ಪಡೆಯಲಿ ಎಂಬ ಶೋಭಾ ಕರಂದ್ಲಾಜೆ ಹೇಳಿಕೆಯನ್ನು ನೀಡಿದ್ದರು..

ಶೋಭ ಕರಂದ್ಲಾಜೆ ಹೇಳಿಕೆಗೆ ಸಚಿವ ಸಿ.ಎಸ್.ಪುಟ್ಟರಾಜು ಇದೀಗ ತಿರುಗೇಟು ನೀಡಿದ್ದಾರೆ. ಶಿಕಾರಿಪುರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲು ಉಂಟಾಗಿದೆ.. ಹಾಗಾಗಿ ಮೊದಲು ಯಡಿಯೂರಪ್ಪನವರಿಂದ ರಾಜೀನಾಮೆ ಕೊಡಿಸಲಿ ಎಂದು ಶೋಭಾ ಕರಂದ್ಲಾಜೆಗೆ ಪುಟ್ಟರಾಜು ಸವಾಲನ್ನು ಹಾಕಿದ್ದಾರೆ.  ಅದೇ ರೀತಿಯಾಗಿ ಚಿಕ್ಕಬಳ್ಳಾಪುರದಂತೆ ಮಂಡ್ಯವನ್ನು ಕೂಡ ಸಿಎಂ ಕುಮಾರಸ್ವಾಮಿಯವರು ಮರೀತಾರ ಅನ್ನೋ ವಿಚಾರದ ಬಗ್ಗೆ ಮಾತನಾಡಿದ ಸಿಎಸ್ ಪುಟ್ಟರಾಜು ಸಿಎಂ ಯಾವ ಕಾರಣಕ್ಕೂ ಮಂಡ್ಯ ಜಿಲ್ಲೆಯನ್ನು ಮರೆಯಲ್ಲ ಹಾಗೇ ಮಂಡ್ಯ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನ ಹಿಂಪಡೆಯುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದುವರೆಗೆ ಕೊಟ್ಟ ಅನುದಾನಕ್ಕಿಂತ ಹೆಚ್ಚು ಅನುದಾನ ಕೊಡ್ತಾರೆ. ಯಾವ ರೀತಿಯಾದ ಗಾಸಿಪ್’ಗಳಿಗೂ ಕಿವಿಕೊಡಬಾರದು, ಸಿಎಂ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿಯೇ ಮುಂದುವರೆಯುತ್ತಾರೆ ಎಂದು ತಿಳಿಸಿದರು.

Edited By

Manjula M

Reported By

Manjula M

Comments