ದೇವೆಗೌಡರಿಗಿಂತ ಚಾಣಾಕ್ಷತನ ಇವರಿಗಿದೆಯಂತೆ..!! ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಬಿಜೆಪಿ ಮುಖಂಡನ ಹೇಳಿಕೆ..!!

04 Jun 2019 12:46 PM | Politics
6093 Report

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಿಂದ ಅಖಾಡಕ್ಕೆ ಇಳಿದಿದ್ದ  ಮಾಜಿ ಪ್ರಧಾನಿ ದೇವೆಗೌಡರು ಮತ್ತು ಬಿಜೆಪಿ ಅಭ್ಯರ್ಥಿ ಬಸವರಾಜು ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿತ್ತು… ಆದರೆ ಮಾಜಿ ಪ್ರಧಾನಿ ದೇವೆಗೌಡರು ಬಿಜೆಪಿ ಅಭ್ಯರ್ಥಿ ವಿರುದ್ದ ಸೋಲನ್ನು ಅನುಭವಿಸಿದರು… ಇದೀಗ ಬಿಜೆಪಿ ಅಭ್ಯರ್ಥಿ ಜಿ. ಎಸ್. ಬಸವರಾಜು ಗೆಲುವಿಗೆ ಡಿಸಿಎಂ ಡಾ. ಜಿ. ಪರಮೇಶ್ವರ್​ ಸಹಕಾರ ನೂರಕ್ಕೆ ಸಾವಿರಪಟ್ಟು ಇದೆ ಎಂದು ಬಿಜೆಪಿ ಮುಖಂಡ ಹಾಗೂ ಜಿ. ಪಂ. ಸದಸ್ಯ ರಾಮಾಂಜನೇಯ ಹೊಸ ಹೇಳಿಕೆ ನೀಡಿ ರಾಜಕೀಯದಲ್ಲಿ ಹೊಸ ಸಂಚಲನ ಉಂಟು ಮಾಡಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಾಂಜನೇಯ, ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಸಹಕರಿಸಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್​ ಅವರಿಗೆ ನಾನು  ಧನ್ಯವಾದ ತಿಳಿಸಿದ್ದು, ರಾಜಕಾರಣದಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ಮೀರಿಸುವ ಚಾಣಾಕ್ಷತೆ ಡಾ. ಜಿ. ಪರಮೇಶ್ವರ್​ಗಿದೆ ಎಂದಿದ್ದಾರೆ. ತಮ್ಮ ಚಾಣಾಕ್ಷತೆ ಉಪಯೋಗಿಸಿಕೊಂಡು ದೇವೇಗೌಡರ ವಿರುದ್ದ ಸೇಡು ತೀರಿಸಿಕೊಂಡಿದ್ದಾರೆ ಎಂದು ರಾಮಾಂಜನೇಯ ಆರೋಪಿಸಿದ್ದಾರೆ. ರಾಮಾಂಜನೇಯರ ಈ ಸ್ಪೋಟಕ ಹೇಳಿಕೆಯಿಂದ ಮತ್ತೋಂದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿದ್ದು ಯಾವ ರೀತಿಯ ಬೆಳವಣಿಗೆಗಳು ಆಗುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments