ಕಾಂಗ್ರೆಸ್ ಗಾಳಕ್ಕೆ ತಗಲಿ ಹಾಕಿಕೊಂಡ ಬಿಜೆಪಿ ಶಾಸಕರು.. !! ಯಾರ್ ಗೊತ್ತಾ..?

01 Jun 2019 2:07 PM | Politics
1286 Report

ಲೋಕಸಭಾ ಫಲಿತಾಂಶದ ಹಿನ್ನಲೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಆದರೂ ಇನ್ನೂ ಸಾಕಷ್ಟು ಬದಲಾವಣೆಗಳು ರಾಜಕೀಯ ವಲಯದಲ್ಲಿ  ಆಗುವ ರೀತಿಯಲ್ಲಿ ಕಾಣಿಸುತ್ತಿದೆ.. ನಮ್ಮ ದೇಶದ ಪ್ರಧಾನಿಯಾಗಿ ನರೇಂಧ್ರ ಮೋದಿಯವರು 2 ನೆ ಬಾರಿಗೆ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಇನ್ನೂ ಇದರ ಬೆನ್ನಲೇ  ಆಪರೇಷನ್ ಕಮಲದಲ್ಲಿ ಸೋತು ಕುಳಿತಿದ್ದ ಬಿಜೆಪಿಗೆ ಇದೀಗ ಮತ್ತೊಂದು ಶಾಕ್ ಎದುರಾಗುವ ಸಂಭವವಿದೆ. .

ಇದೀಗ ದೋಸ್ತಿ ನಾಯಕರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಕೇವಲ ನಮ್ಮ ಶಾಸಕರನ್ನು ಹಿಡಿದಿಟ್ಟುಕೊಂಡರೆ ಸಾಲದು ಆಪರೇಷನ್ ಕಮಲಕ್ಕೆ ತಿರುಗೇಟು ನೀಡಲು ಬಿಜೆಪಿಯ ಎಂಎಲ್‍ಎ ಗಳನ್ನು ಸೆಳೆಯಲು ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರು ಮುಂದಾಗಿದ್ದಾರೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ ಎನ್ನಲಾಗುತ್ತಿದೆ. ಸದ್ಯ ‘ಆಪರೇಷನ್ ಕಮಲ’ ವರ್ಕೌಟ್ ಆಗದೆ ಸುಮ್ಮನೆ ಇರುವ  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರಿಗೆ ದೋಸ್ತಿ ಸರ್ಕಾರ ನೀಡಲು ಮುಂದಾಗಿದೆ. ಕನಕಗಿರಿ ಶಾಸಕ ಬಸವರಾಜ್ ದಡೇಸಗೂರ್, ಸುರಪುರ ಶಾಸಕ ರಾಜುಗೌಡ, ಸಿರಗುಪ್ಪ ಶಾಸಕ ಸೋಮಲಿಂಗಪ್ಪ ಮತ್ತು ರಾಯಚೂರು ಶಾಸಕ ಡಾ. ಶಿವರಾಜ್ ಪಾಟೀಲ್‍ಗೆ ಕೈ ಗಾಳ ಹಾಕಿದೆ. ಇಷ್ಟು ದಿನ ಆಪರೇಷನ್ ಕಮಲ ಆದ ಆಪರೇಷನ್ ಕೈ ಪ್ರಾರಂಭವಾಗಿದೆ.

Edited By

Manjula M

Reported By

Manjula M

Comments