ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಮೂವರು ಸಚಿವರಿಗೆ ಮೋದಿ ಕ್ಲಾಸ್..!

01 Jun 2019 12:42 PM | Politics
236 Report

ಲೋಕಸಭಾ ಚುನಾವಣೆಯ ನಂತರ ಮತ್ತೆ ಎರಡನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರು ಅಧಿಕಾರವನ್ನು ಸ್ವೀಕಾರ ಮಾಡಿದ್ಧಾರೆ… ಪ್ರಧಾನ ಮಂತ್ರಿ ಮತ್ತೆ ನರೇಂದ್ರ ಮೋದಿಯವರೆ ಆಗಲಿ ಎಂಬುದು ಸಾಕಷ್ಟು ಜನರ ಕನಸಾಗಿತ್ತು… ಆ ಕನಸು ಇದೀಗ ನನಸಾಗಿದೆ.. ನರೇಂದ್ರಮೋದಿಯವರು, ಅಧಿಕಾರ ಸ್ವೀಕರಿಸಿದ ಸಚಿವರಿಗೆ ಮೊದಲ ದಿನವೇ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿಯು ಪಕ್ಷದ ಮೂಲಗಳಿಂದ ತಿಳಿದಿದೆ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದ ಮೂವರು ಮಂತ್ರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ..

ಸಚಿವರಾದ ಡಿವಿ ಸದಾನಂದ ಗೌಡ, ಪ್ರಹ್ಲಾದ್ ಜೋಶಿ ಹಾಗೂ ಸುರೇಶ್ ಅಂಗಡಿಗೆ ನರೇಂದ್ರ ಮೋದಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಂಸದೀಯ ಮಂಡಳಿ ಸಭೆಯಲ್ಲಿ ಮೋದಿ ಎಚ್ಚರಿಕೆ ಕೊಟ್ಟಿದ್ದರು. ಆದರೆ ಮೋದಿಯವರ ಎಚ್ಚರಿಕೆಯನ್ನು ಮುರಿದ ಹಿನ್ನೆಲೆಯಲ್ಲಿ ಈ ಮೂವರು ಸಚಿವರ ವಿರುದ್ಧ ಗರಂ ಆಗಿದ್ದಾರೆ ಎನ್ನಲಾಗಿದೆ. ಪ್ರಮಾಣವಚನಕ್ಕೂ ಮುನ್ನವೇ ಈ ಮೂವರು ಸಚಿವರು ನಮಗೆ ಸಚಿವ ಸ್ಥಾನ ಕೊಡ್ತಿದ್ದಾರೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು... ಈ ವಿಚಾರ ಪ್ರಧಾನಿ ಮೋದಿಯವರ ಗಮನಕ್ಕೆ ಬಂದಿದ್ದು, ಪ್ರಮಾಣ ವಚನದಂದೇ ನಡೆದ ಸಭೆಯಲ್ಲಿ ಮೂವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.ನನ್ನ ಸಲಹೆಯನ್ನು ಯಾಕೆ ಪಾಲಿಸಿಲ್ಲ ಎಂದು ಮೂವರನ್ನೂ ಮೋದಿ ಪ್ರಶ್ನಿಸಿದ್ದಾರೆ. ಅಲ್ಲದೆ,  ನಿಮ್ಮ ಸಚಿವಾಲಯದ ಬಗ್ಗೆ ತಿಳಿದುಕೊಳ್ಳಿ. ಆಮೇಲೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಡಿ ಸಖತ್ತಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.

Edited By

Manjula M

Reported By

Manjula M

Comments