ನಾನು ಎಸ್ ಎಂ ಕೃಷ್ಣ ಅವರ ದೊಡ್ಡ ಅಭಿಮಾನಿ ಎಂದ ಜೆಡಿಎಸ್ ಶಾಸಕ..!!

31 May 2019 1:51 PM | Politics
5252 Report

ರಾಜಕೀಯ ಪಕ್ಷಗಳಲ್ಲಿ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗಲ್ಲ…ರಾಜಕೀಯದಲ್ಲಿ ಇದೆಲ್ಲಾ ಕಾಮನ್ ಆಗಿರುತ್ತದೆ. ಇದಕ್ಕೆಲ್ಲಾ ಮೀರಿದ್ದು ಗೆಳೆತನ ಸ್ನೇಹ ಪ್ರೀತಿ ವಿಶ್ವಾಸ… ಇದೀಗ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ದೊಡ್ಡ ಅಭಿಮಾನಿ ನಾನು ಎಂದು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದ್ದಾರೆ.

ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಕಂಠಯ್ಯ, ಮೋದಿ ಪ್ರಭಾವಿ ವ್ಯಕ್ತಿ. ಅವರ ನೇತೃತ್ವದ ಬಿಜೆಪಿ ಅವರು ಆಪರೇಷನ್ ಕಮಲಕ್ಕೆ ಕೈ ಹಾಕಲ್ಲ ಎಂದು ತಿಳಿದುಕೊಂಡಿದ್ದೇನೆ...  ಆಪರೇಷನ್ ಕಮಲ ಸತ್ಯಕ್ಕೆ ದೂರವಾದ ವಿಚಾರ. ನಾನು ಯಾವಾಗಲೂ ಕುಮಾರಸ್ವಾಮಿಯವರ ಪರ ಇರುತ್ತೇನೆ ಎಂದರು ಶ್ರೀರಂಗಪಟ್ಟಣ ಪುರಸಭೆ ಫಲಿತಾಂಶ ಜೆಡಿಎಸ್ ಪರ ಬಂದಿರೋದು ಎಲ್ಲರಿಗೂ ಕೂಡ ಸಂತಸವನ್ನು  ತಂದಿದೆ.  ಕೇಂದ್ರ ಸರ್ಕಾರದ ಜನಾಭಿಪ್ರಾಯ ಮೋದಿ ಪರ ಇತ್ತು, ಆದರೆ ರಾಜ್ಯದಲ್ಲಿ ಕುಮಾರಸ್ವಾಮಿ ಕೈ ಬಲಪಡಿಸಲು ಸ್ಥಳೀಯ ಸಂಸ್ಥೆ ಜೆಡಿಎಸ್ ಪರ ಬಂದಿದೆ ಎಂದರು... ಸುಮಲತಾ ಗೆಲುವಿಗೆ ಅಂಬರೀಶ್ ಸಾವಿನ ಸಿಂಪತಿ ಎಂದು ತಿಳಿಸಿದರು.

Edited By

Manjula M

Reported By

Manjula M

Comments