ನನ್ನ ಸೋಲಿಗೆ ನಾನೇ ಹೊಣೆ ಎಂದ ನಿಖಿಲ್ ಕುಮಾರಸ್ವಾಮಿ..!!

30 May 2019 5:38 PM | Politics
556 Report

ಈ ಬಾರಿಯ ಲೋಕಸಭಾ ಚುನಾವಣೆಯು ಹೆಚ್ಚು ಸದ್ದು ಮಾಡಿತ್ತು… ಅದರಲ್ಲೂ ಮಂಡ್ಯ ಅಖಾಡ ಮಾತ್ರ ಇಡೀ ಇಂಡಿಯಾವೇ ಒಮ್ಮೆ ತಿರುಗಿ ನೋಡುವಂತೆ ಮಾಡಿತ್ತು.. ದೋಸ್ತಿ ನಾಯಕರ ಪರವಾಗಿ ನಿಖಿಲ್ ಅಖಾಡಕ್ಕೆ ಇಳಿದಿದ್ದರೆ, ಮತ್ತೊಂದು ಕಡೆ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಖಾಡಕ್ಕೆ ಇಳಿದಿದ್ದರು.. ಇಬ್ಬರ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು.. ಆದರೆ ನಿಖಿಲ್ ಸುಮಲತಾ ಮುಂದೆ ಸೋತರು…

ಅಭಿಷೇಕ್‌  ಅಂಬರೀಶ್ ಅಭಿನಯದ ಅಮರ್‌ ಸಿನಿಮಾ ನಾಳೆ ಬಿಡುಗಡೆಯಾಗಲಿದ್ದು, ಇದರ ನಡುವೆ ನಿಖಿಲ್‌ ಕುಮಾರಸ್ವಾಮಿಯವರು ಕೂಡ ಅಭಿಷೇಕ್ ಗೆ ವಿಶ್‌ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದ ಈ ಬಗ್ಗೆ ಬರೆದುಕೊಂಡಿರುವ ನಿಖಿಲ್‌ ಕುಮಾರಸ್ವಾಮಿಯವರು ಇದೇ ವೇಳೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆಲುವು ಕಂಡಿರುವ ಸುಮಲತಾ ಅವರಿಗೂ ಅವರು ಶುಭಾಷಯವನ್ನು ತಿಳಿಸಿದ್ದಾರೆ.. ಇದೇ ವೇಳೆ ಅವರು ಮಂಡ್ಯ ಜಿಲ್ಲೆಯ ಅಭಿವೃದ್ದಿಯ ದೃಷ್ಟಿಯಿಂದ ನಾವು ಎಲ್ಲರೂ ಕೂಡ ಕೈಜೋಡಿಸಬೇಕಾಗಿದೆ ಅಂತ ಅವರು ಮನವಿ ಮಾಡಿಕೊಂಡಿದ್ದಾರೆ. ಅದನ್ನೆಲ್ಲಾ ನನ್ನ ಸೋಲಿಗೆ ನಾನೇ ಕಾರಣನೇ ಹೊರತು ಅದಕ್ಕೆ ಮಂಡ್ಯ ಲೋಕಸಭಾ ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಸದ್ಯಸರಾಗಲಿ, ಪರಿಷತ್‌ ಸದ್ಯಸರಾಗಲಿ ಕಾರಣರಲ್ಲ ಅಂತ ಹೇಳಿದ್ದಾರೆ. ನನ್ನ ಸೋಲಿಗೆ ನಾನೇ ಕಾರಣ ಎಂದು ನಿಖಿಲ್ ಕುಮಾರಸ್ವಾಮಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ…

Edited By

Manjula M

Reported By

Manjula M

Comments