ಕಾಂಗ್ರೆಸ್ ಗೆ ಬಿಗ್ ಶಾಕ್: 12 ಶಾಸಕರು ರಾಜೀನಾಮೆ..!?

30 May 2019 2:56 PM | Politics
8705 Report

ಈ ಬಾರಿಯ ಲೋಕಸಮರ ಸದ್ದು ಮಾಡಿದಷ್ಟು ಯಾವ ಬಾರಿಯೂ ಕೂಡ ಮಾಡಿರಲಿಲ್ಲ ಎನಿಸುತ್ತದೆ.. ಯಾವಾಗ ಲೋಕಸಮರ ಪ್ರಾರಂಭವಾಯಿತೋ ಆಗಲೇ ಪಕ್ಷಾಂತರಗಳು ಪ್ರಾರಂಭವಾದವು.. ಪಕ್ಷ ಬಿಟ್ಟು ಪಕ್ಷಕ್ಕೆ ಹೋಗುವುದು ರಾಜಕೀಯದಲ್ಲಿ ಹೊಸದೇನಲ್ಲ… ಫಲಿತಾಂಶ ಬಂದ ಮೇಲಂತೂ ಕೆಲವೊಂದು ರಾಜಕೀಯ ಪಕ್ಷಗಳಲ್ಲಿ ಭಯ ಶುರುವಾದಂತೆ ಕಾಣುತ್ತಿದೆ…

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.. ಮಣಿಪುರದಲ್ಲಿಯೂ ಕೂಡ ಕಾಂಗ್ರೆಸ್ ಗೆ 12 ಶಾಸಕರು ರಾಜಿನಾಮೆ ನೀಡಿದ್ದಾರೆ. ಮಣಿಪುರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗೈಖಂಗಾಮ್ ಈ ವಿಷಯವಾಗಿ ಮಾಹಿತಿ ನೀಡಿದ್ದು, ನಮ್ಮ ಪಕ್ಷದ ಕೆಲವು ಶಾಸಕ ಮಿತ್ರರು ರಾಜೀನಾಮೆ ನೀಡಿದ್ದಾರೆ. ಆದರೆ ನಾನು ಇನ್ನೂ ರಾಜೀನಾಮೆ ಪತ್ರಗಳನ್ನು ನೋಡಿಲ್ಲ ಎಂದು ತಿಳಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿನ ಕಾರಣಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜೀನಾಮೆ ನೀಡಲು ಇದೀಗ ಮುಂದಾಗಿದ್ದಾರೆ. ಪಕ್ಷ ಸಂಘಟನೆ ದೃಷ್ಟಿಯಿಂದ ರಾಹುಲ್ ಗಾಂಧಿ ರಾಜೀನಾಮೆ ನೀಡಬಾರದು ಅವರೇ ಮುಂದುವರೆಯಬೇಕೆಂಬ ಒತ್ತಾಯ ಕೇಳಿ ಬಂದಿದೆ. ಹೀಗಿರುವಾಗಲೇ 12 ಮಂದಿ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿರುವುದು ನಾಯಕರನ್ನು ಕಂಗಾಲಾಗುವಂತೆ ಮಾಡಿದೆ ಎನ್ನಲಾಗಿದೆ. ಒಟ್ಟಾರೆ ಚುನಾವಣೆ ಮುಗಿದರೂ ಇನ್ನೂ  ಪಕ್ಷದಿಂದ ಪಕ್ಷಕ್ಕೆ ಹಾರುವ ಕೆಲಸ ಮಾತ್ರ ಕಡಿಮೆಯಾಗಿಲ್ಲ..

Edited By

Manjula M

Reported By

Manjula M

Comments