ಮೋದಿ ಸಚಿವ ಸಂಪುಟದಲ್ಲಿ ಯಾರ್ಯಾರು ಇರ್ತಾರೆ ಗೊತ್ತಾ..?

30 May 2019 9:50 AM | Politics
707 Report

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಿ ವಿರೋಧ ಪಕ್ಷಗಳ ಮುಂದೆ ಬೀಗುತ್ತಿದೆ… ಜೆಡಿಎಸ್ ಕಾಂಗ್ರೆಸ್ ಅನ್ನು ನೆಲಸಮ ಮಾಡಿ ಬಿಜೆಪಿ ಗೆಲುವನ್ನು ಸಾಧಿಸಿಕೊಂಡಿದೆ… ಇದೇ ಹಿನ್ನಲೆಯಲ್ಲಿ ಮೋದಿ ಮತ್ತೆ ಪ್ರಧಾನಿಯಾಗಲು ಸಿದ್ದವಾಗಿದ್ದಾರೆ. ಮೇ, 30ರ ಗುರುವಾರ ನರೇಂದ್ರ ಮೋದಿ ಎರಡನೇ ಬಾರಿ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬಹುಮತ ಹೊಂದಿದ್ದ ಪಕ್ಷದ ಪ್ರಧಾನಿಯಾಗಿ 5 ವರ್ಷ ಪೂರೈಸಿ ಮತ್ತೊಮ್ಮೆ ಬಹುಮತದೊಂದಿಗೆ ಪ್ರಧಾನಿಯಾಗಲಿದ್ದಾರೆ.

ಇಂದು ಸರಿ ಸುಮಾರು 10 ದೇಶಗಳ ಪ್ರಮುಖರು ಹಾಗೂ ದೇಶದ ಅನೇಕ ಗಣ್ಯಾತಿಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ರಾಷ್ಟ್ರಪತಿ ಭವನದ ಮುಂಭಾಗದ ಬಯಲಿನಲ್ಲಿ ನಡೆಯುವ ಸಮಾರಂಭದಲ್ಲಿ ನರೇಂದ್ರ ಮೋದಿ ಅವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಪ್ರಮಾಣ ವಚನ ಹಾಗೂ ಗೋಪ್ಯತಾ ವಿಧಿಯನ್ನು ಬೋಧಿಸಲಿದ್ದಾರೆ. ಪ್ರಧಾನ ಮಂತ್ರಿಯಾಗಲಿರುವ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ಪಡೆಯಲು ಯಾರೆಲ್ಲ ರೇಸ್ ನಲ್ಲಿ ಇದ್ದಾರೆ ಎಂಬುದು ಈ ಕೆಳಕಂಡಂತೆ ಇದೆ.

  • ಅಮಿತ್‌ ಶಾ
  • ರಾಜ್‌ನಾಥ್‌ಸಿಂಗ್‌
  • ನಿತಿನ್‌ ಗಡ್ಕರಿ
  • ಪಿಯೂಷ್‌ ಗೋಯಲ್‌
  • ನಿರ್ಮಲಾ ಸೀತಾರಾಮನ್‌
  • ರವಿಶಂಕರ್‌ ಪ್ರಸಾದ್‌
  • ಸ್ಮೃತಿ ಇರಾನಿ
  • ಪ್ರಕಾಶ್‌ ಜಾವಡೇಕರ್‌
  • ರಾಜ್ಯದಿಂದ ಯಾರೆಲ್ಲಾ ರೇಸಲ್ಲಿ?
  • ನಿರ್ಮಲಾ ಸೀತಾರಾಮನ್‌
  • ಪ್ರಹ್ಲಾದ್‌ ಜೋಶಿ/ಅನಂತಕುಮಾರ್‌ ಹೆಗಡೆ
  • ಡಾ.ಉಮೇಶ್‌ ಜಾಧವ್‌/ರಮೇಶ್‌ ಜಿಗಜಿಣಗಿ
  • ಸುರೇಶ್‌ ಅಂಗಡಿ/ಪಿ.ಸಿ.ಗದ್ದಿಗೌಡರ್‌/ಶಿವಕುಮಾರ್‌ ಉದಾಸಿ/ಜಿ.ಎಸ್‌.ಬಸವರಾಜು
  • ಶೋಭಾ ಕರಂದ್ಲಾಜೆ/ಡಿ.ವಿ.ಸದಾನಂದಗೌಡ/ಪ್ರತಾಪ್‌ ಸಿಂಹ
  • ಪಿ.ಸಿ.ಮೋಹನ್‌

ಇವರಲ್ಲಿ ಯಾರು ಮೋದಿ ಸಂಪುಟವನ್ನು ಸೇರಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.. ಮೋದಿಯವರು ಕಳೆದ ಬಾರಿ ಪ್ರಧಾನಿಯಾಗಿದ್ದಾಗ ಸಾಕಷ್ಟು ಬದಲಾವಣೆಗಳು ಆದವು.. ಈ ಬಾರಿ ಯಾವೆಲ್ಲಾ ರೀತಿಯ ಬದಲಾವಣೆಗಳು ಆಗುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments