ಜೆಡಿಎಸ್ ತೊರೆದು ಬಿಎಸ್'ಪಿ ಸೇರಿದ ಪ್ರಭಾವಿ ಶಾಸಕ ದೇವೆಗೌಡರನ್ನು ಭೇಟಿಯಾಗಿದ್ದೇಕೆ..!!

29 May 2019 2:47 PM | Politics
18273 Report

ಲೋಕಸಭಾ ಚುನಾವಣೆಯ ನಂತರ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ.. ಲೋಕ ಸಮರದ ಹೊತ್ತಿನಲ್ಲಿ ಸಾಕಷ್ಟು ಅತೃಪ್ತ ಶಾಸಕರು ಪಕ್ಷಾಂತರಗೊಂಡರು .. ಅದೇ ಸಮಯದಲ್ಲಿ ಲೋಕಸಭಾ ಚುನಾವಣೆಗಾಗಿ ಜೆಡಿಎಸ್‌ ತೊರೆದು ಬಿಎಸ್‌ಪಿಯಿಂದ ಕಣಕ್ಕಿಳಿದು ಜಯಗಳಿಸಿರುವ ಡ್ಯಾನಿಶ್‌ ಅಲಿ ಅವರು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ..

ಮಂಗಳವಾರ ಪದ್ಮನಾಭನಗರದ ದೇವೇಗೌಡರ ನಿವಾಸಕ್ಕೆ ಆಗಮಿಸಿ ಕೆಲ ಸಮಯ ರಾಜ್ಯ ರಾಜಕೀಯ ಬೆಳವಣಿಗೆ ಕುರಿತು ಸಮಾಲೋಚನೆ ನಡೆಸಿದರು. ಇದೇ ಸಮಯದಲ್ಲಿ ಸರ್ಕಾರವನ್ನು ಅಭದ್ರಗೊಳಿಸಲು ಬಿಜೆಪಿ ನಡೆಸುವ ಪ್ರಯತ್ನಗಳು ಮತ್ತು ಕಾಂಗ್ರೆಸ್‌ನ ನಡೆಯ ಬಗ್ಗೆ ಮಾತುಕತೆ ನಡೆಸಿದರು ಎಂದು ಹೇಳಲಾಗಿದೆ. ದೇವೇಗೌಡರ ಭೇಟಿ ನಂತರ ಮಾಧ್ಯಮದವರೊಂದಿಗೆ ಜೊತೆ ಮಾತನಾಡಿದ ಡ್ಯಾನಿಶ್ ಅಲಿ ನನ್ನ ರಾಜಕೀಯ ಗುರುಗಳ ಆಶೀರ್ವಾದ ಪಡೆಯಲು ಬಂದಿದ್ದೇನೆ..  ನನ್ನ ಮತ್ತು ಅವರ ಕುಟುಂಬದ ಸಂಬಂಧ ದಶಕಗಳ ಕಾಲದ್ದಾಗಿದೆ. ನಾನು ಬೇರೆ ಪಕ್ಷಕ್ಕೆ ಹೋಗಿದ್ದರೂ ಸಹ ಅವರ ಮತ್ತು ನನ್ನ ಸಂಬಂಧ ಮೊದಲಿನಂತೆಯೇ ಇರುತ್ತದೆ ಎಂದು ತಿಳಿಸಿದ್ದಾರೆ. ಈ ಲೋಕ ಸಮರದ ಫಲಿತಾಂಶ ಅಂದುಕೊಂಡಂತೆ ಆಗಿಲ್ಲ ಎಂಬುದು ಹಲವು ರಾಜಕೀಯ ಗಣ್ಯರ ಮಾತಾಗಿದೆ…

Edited By

Manjula M

Reported By

Manjula M

Comments