ಅನುಮಾನಕ್ಕೆ ಕಾರಣವಾಯ್ತು ಸುಮಲತಾ ಅಂಬರೀಶ್’ನ  ಈ ಕೆಲಸ..!?

29 May 2019 1:04 PM | Politics
803 Report

ಸ್ಯಾಂಡಲ್ ವುಡ್ ನ ರೆಬಲ್ ಸ್ಟಾರ್ ಅಂಬರೀಶ್ ಅವರ ಜನ್ಮದಿನದ ಅಂಗವಾಗಿ ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಇಂದು ಸ್ವಾಭಿಮಾನದ ಸಮಾವೇಶ ನಡೆಯಲಿದೆ. ಇದರ ಬೆನ್ನಲೆ ಸಮಾವೇಶದ ಅಂಗವಾಗಿ ಹಾಕಲಾಗಿದ್ದ ಫ್ಲೆಕ್ಸ್ ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಚಲುವರಾಯಸ್ವಾಮಿ, ಜಮೀರ್ ಅಹಮದ್, ನರೇಂದ್ರಸ್ವಾಮಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರ ಫೋಟೋಗಳು ಇವೆ.

ಈ ಬಾರಿಯ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿದ್ದ ಸುಮಲತಾ ಅವರಿಗೆ ಕಾಂಗ್ರೆಸ್‍ನ ಘಟಾನುಘಟಿ ನಾಯಕರು ಪರೋಕ್ಷವಾಗಿಯೇ ಬೆಂಬಲವನ್ನು ವ್ಯಕ್ತ ಪಡಿಸಿದ್ದರು ಎಂಬ ಚರ್ಚೆ ಪ್ರಾರಂಭದಿಂದಲೂ ಕೂಡ ಕೇಳಿ ಬಂದಿತ್ತು. ಆದರೆ ಇದೀಗ ಸುಮಲತಾ ಅಂಬರೀಶ್ ಕೃತಜ್ಞತಾ ಸಮಾವೇಶದ ಫ್ಲೆಕ್ಸ್ ನಲ್ಲಿ ಕಾಂಗ್ರೆಸ್ ಮುಖಂಡರ ಫೋಟೋಗಳು ರಾರಾಜಿಸುತ್ತಿರುವುದು ಅನುಮಾನಕ್ಕೆ ಮತ್ತಷ್ಟು ಎಡೆಮಾಡಿಕೊಟ್ಟಿದೆ. ಒಟ್ಟಾರೆಯಾಗಿ ಲೋಕಸಭಾ ಚುನಾವಣೆಯಲ್ಲಿ ದೋಸ್ತಿ ನಾಯಕರು ನಿಖಿಲ್ ಗೆ ಬೆಂಬಲ ಸೂಚಿಸದೆ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಿದ್ದಾರೆ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತಿದೆ… ಲೋಕಸಮರದಲ್ಲಿ ವಿಜಯ ಸಾಧಿಸಿರುವುದಕ್ಕಾಗಿ ಸುಮಲತಾ ಅವರು ಇಂದು ಕೃತಜ್ಞತಾ ಸಮಾವೇಶವನ್ನು ಏರ್ಪಡಿಸಲಾಗಿದೆ.

Edited By

Manjula M

Reported By

Manjula M

Comments