`ಆಪರೇಷನ್ ಕಮಲ’ ಗಾಳಕ್ಕೆ ತಗುಲಿ ಹಾಕಿಕೊಂಡ ಜೆಡಿಎಸ್  ಮೊದಲ ಮೀನು..?

28 May 2019 12:26 PM | Politics
11515 Report

ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿಯೇ ಸಾಕಷ್ಟು ಬೆಳವಣಿಗೆಗಳು ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿವೆ.. ಲೋಕಸಮರದಲ್ಲಿ ಬಿಜೆಪಿಯು ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡಿದೆ.. ಮತ್ತೆ ನರೇಂದ್ರ ಮೋದಿಯವರೆ ಪ್ರಧಾನಿಯಾಗಿದ್ದಾರೆ.. ಇದೇ ಹಿನ್ನಲೆಯಲ್ಲಿಯೇ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ..ಲೋಕಸಭೆ ಚುನಾವಣೆ ಫಲಿತಾಂಶದ ಬೆನ್ನಲ್ಲೇ ರಾಜ್ಯದಲ್ಲಿ ಮೈತ್ರಿ ಸರ್ಕಾರವನ್ನು ಉರುಳಿಸಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿರುವ ಬಿಜೆಪಿ ಇದೀಗ ಜೆಡಿಎಸ್ ಶಾಸಕರೊಬ್ಬರಿಗೆ ಗಾಳ ಹಾಕಿದೆ ಎನ್ನಲಾಗಿದೆ.

ಶಿರಾ ಶಾಸಕ ಕೆಎಸ್‌ಆರ್ ಟಿಸಿ ಅಧ್ಯಕ್ಷ ಬಿ. ಸತ್ಯನಾರಾಯಣ್ ಗೆ ಬಿಜೆಪಿ ನಾಯಕರು ಸಚಿವ ಸ್ಥಾನದ ಆಫರ್ ಅನ್ನು  ನೀಡಿದ್ದಾರೆ ಎಂದು ಹೇಳಲಾಗುತ್ತಿದೆ..  ಡಿ.ವಿ. ಸದಾನಂದಗೌಡ ಹಾಗೂ ಸಿ.ಪಿ. ಯೋಗೇಶ್ವರ್ ಮೂಲಕ ಬಿ. ಸತ್ಯನಾರಾಯಣ್ ಅವರನ್ನು ಸಂಪರ್ಕಿಸಿ ಸಚಿವ ಸ್ಥಾನದ ಆಫರ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಸತ್ಯನಾರಾಯಣ್ ಅವರು ಸಚಿವ ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದ್ದರು. ಆದರೆ ಜೆಡಿಎಸ್ ಕೆಎಸ್ ಆರ್ ಟಿಸಿ ಅಧ್ಯಕ್ಷ ಸ್ಥಾನವನ್ನು ನೀಡಿದ್ದರು. ಆದರೆ, ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಪ್ರತಿ ವಿಚಾರಕ್ಕೂ ಹಸ್ತಕ್ಷೇಪ ವಹಿಸುತ್ತಿದ್ದಾರೆಂದು ಆರೋಪಿಸಲಾಗಿದೆ. ಹೀಗಾಗಿ ಸತ್ಯನಾರಾಯಣ್ ಅವರು ಬಿಜೆಪಿ ಸೇರುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.. ಒಟ್ಟಾರೆಯಾಗಿ ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ಹಿನ್ನಲೆಯಲ್ಲಿಯೇ ಆಪರೇಷನ್ ಕಮಲ ಶುರುವಾಗಿ ಬಿಟ್ಟಿದೆ.. ಆಪರೇಷನ್ ಕಮಲದ ಗಾಳಕ್ಕೆ ಯಾರು ಯಾರು ಸಿಲುಕಿಹಾಕಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments