ಪ್ರಜ್ವಲ್ ರೇವಣ್ಣ ರಾಜೀನಾಮೆಗೆ ನಿರ್ಧಾರ!

24 May 2019 12:42 PM | Politics
253 Report

ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರ ಸೋಲಿನಿಂದ ನನಗೆ ಬೇಸರವಾಗಿದೆ. ನಾನು ನನ್ನ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಹಾಸನ ಕ್ಷೇತ್ರವನ್ನು ದೇವೇಗೌಡರಿಗೆ ಬಿಟ್ಟುಕೊಡಲು ನಿರ್ಧರಿಸಿದ್ದೇನೆ ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದ್ದಾರೆ.

ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಜ್ವಲ್​ ರೇವಣ್ಣ, ದೇವೇಗೌಡರು ರಾಜಕೀಯದಲ್ಲಿ ಆಸಕ್ತಿ ಕಳೆದುಕೊಳ್ಳಬಾರದು. ನನ್ನ ಈ ನಿರ್ಧಾರದಿಂದ ಜನತೆ ಬೇಸರ ಮಾಡಿಕೊಳ್ಳಬಾರದು. ನನ್ನ ಮನಸ್ಸಿನಲ್ಲಿದ್ದ ಹಾಗೆ ನಾನು ನಿರ್ಧಾರ ಮಾಡುತ್ತಿದ್ದೇನೆ. ಸಿಎಂ ಅವರನ್ನು ಭೇಟಿ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ. ದೇವೇಗೌಡರ ಮನವೊಲಿಸಿ ನಾನು ರಾಜೀನಾಮೆ ನೀಡುತ್ತೇನೆ ಎಂದು ತಿಳಿಸಿದರು.

ದೇವೇಗೌಡರನ್ನು ರಾಜಕೀಯದಲ್ಲಿ ಕಳೆದುಕೊಳ್ಳಲು ನಾನು ಇಷ್ಟಪಡುವುದಿಲ್ಲ. ನಾನು ಇಂದು ದೇವೇಗೌಡರನ್ನು ಭೇಟಿಯಾಗಿ ಅವರ ಮನವೊಲಿಸಿ ಜಿಲ್ಲೆಯಲ್ಲಿ ಮತ್ತೆ ಚುನಾವಣೆಗೆ ನಿಲ್ಲಿಸಬೇಕಿದೆ ಎಂದು ಹೇಳುವ ಮೂಲಕ ರಾಜೀನಾಮೆಗೆ ಇಂಗಿತ ವ್ಯಕ್ತಪಡಿಸಿದ್ದಾರೆ. 

ನನ್ನ ಗೆಲುವು ಪ್ರಜ್ವಲ್ ಗೆಲುವು ಅಲ್ಲ. ನಮ್ಮ ಜೆಡಿಎಸ್- ಕಾಂಗ್ರೆಸ್ ಕಾರ್ಯಕರ್ತರ ಗೆಲುವು. ಇದು ದೇವೇಗೌಡರ ಗೆಲುವು. ಇಲ್ಲಿರೋದು ಅವರ ಶಕ್ತಿ. ನನಗೆ ದುಖ ಆಗುತ್ತಿದೆ. ಹೋರಾಟವೇ ನನ್ನ ಜೀವನ ಎಂದು ಗೌಡರು ಹೇಳಿದ್ದರು. ತುಮಕೂರಿಗೆ ಗೌಡರ ವಿಶೇಷ ಕೊಡುಗೆ ಇದೆ. ಆದರೆ ಕೆಲವು ತುಮಕೂರಿನ ನಾಯಕರು ಅವರ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ದೇವೇಗೌಡರು ತುಮಕೂರಿಗೆ ಹೇಮಾವತಿ ನೀರು ಹರಿಸಲು ಪರಿಶ್ರಮ ಪಟ್ಟಿದ್ದಾರೆ ಎಂದು ತಮ್ಮ ತಾತನ ಬಗ್ಗೆ ಮಾತನಾಡಿದರು.

Edited By

venki swamy

Reported By

venki swamy

Comments