ಪ್ರಜ್ವಲ್ ರೇವಣ್ಣಗೆ ಸಿಕ್ತು ಬಹುಮತಗಳ ಅಂತರ..!!

23 May 2019 10:31 AM | Politics
227 Report

ಲೋಕಸಮರದ ಫಲಿತಾಂಶವು ಇಷ್ಟು ದಿನ ಇದ್ದಂತಹ ಕುತೂಹಲಕ್ಕೆ ತೆರೆ ಎಳೆಯಲಿದೆ.. ಅಭ್ಯರ್ಥಿಗಳ  ಎದೆಯಲ್ಲಿ ಢವ ಢವ ಶುರುವಾಗಿದೆ… ಒಂದು ಕಡೆ ಲೋಕಸಭಾ ಮಹಾ ಸಮರದ ಎಣಿಕೆ ಕಾರ್ಯ ಭರದಿಂದ ಪ್ರಾರಂಭವಾಗಿದೆ... ಇತ್ತ ಅಭ್ಯರ್ಥಿಗಳು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಕಾಯುತ್ತಿದ್ದಾರೆ.. 

ಜೆಡಿಎಸ್ ನ ಭಧ್ರ ಕೋಟೆಯಾಗಿರುವ ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಪ್ರಜ್ವಲ್ ರೇವಣ್ಣ ಭಾರೀ ಮುನ್ನಡೆ ಗೆಲುವನ್ನು ಕಾಯ್ದುಕೊಂಡಿದ್ದಾರೆ. ದೇವೇಗೌಡರು ತಮ್ಮ ಮೊಮ್ಮಗನಿಗೆ ಹಾಸನ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು.. ಪ್ರಜ್ವಲ್ ರೇವಣ್ಣ ಹಾಸನದಿಂದ ಅಖಾಡಕ್ಕೆ ಇಳಿದಿದ್ದರು. ಪ್ರಜ್ವಲ್ ಎದುರಾಳಿಯಾಗಿ ಕಾಂಗ್ರೆಸ್ ಗೆ ಕೈ ಕೊಟ್ಟು ಬಿಜೆಪಿ ಸೇರಿದ ಎ. ಮಂಜು ಸ್ಪರ್ಧಿಸಿದ್ದರು. ಆದರೆ ಬಿಜೆಪಿ ಅಭ್ಯರ್ಥಿ   ಎ. ಮಂಜು ಗೆ ಹಿನ್ನಡೆ ಆಗಿದೆ. ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಎ. ಮಂಜು ವಿರುದ್ಧ 21 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇದನ್ನು ನೋಡಿದರೆ ಎ ಮಂಜುಗೆ ಪ್ರಜ್ವಲ್ ವಿರುದ್ದ ಮುಖಭಂಗವಾಗುವುದು ಗ್ಯಾರೆಂಟಿ.

Edited By

Manjula M

Reported By

Manjula M

Comments