ಸುಮಲತಾ ಗೆಲುವು ಖಚಿತವಾದರೆ ಯಶ್, ದರ್ಶನ್ ಮಂಡ್ಯಕ್ಕೆ ಬರುವ ಸಾಧ್ಯತೆ..!!

23 May 2019 9:36 AM | Politics
35 Report

ಲೋಕಸಮರದ ಫಲಿತಾಂಶಕ್ಕಾಗಿ ಇಷ್ಟು ದಿನ ಎದುರು ನೋಡುತ್ತಿದ್ದರು… ಇಂದು ಆ ಕಾತುರಕ್ಕೆ ತೆರೆ  ಬೀಳಲಿದೆ.. ಲೋಕಸಮರದ ಫಲಿತಾಂಶದ ಹಿನ್ನಲೆಯಲ್ಲಿ ಮಂಡ್ಯದ ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಅವರು ಇಂದು ಚಾಮುಂಡೇಶ್ವರಿ ದೇವರ ಮೊರೆ ಹೋಗಲಿದ್ದಾರೆ.

ಸುಮಲತಾ ಅಂಬರೀಶ್ ಅವರು ಇಂದು 10 ಗಂಟೆ ಸುಮಾರಿಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.. ನಂತರ ತಮ್ಮ ಬೆಂಬಲಿಗರ ಸೂಚನೆ ಮೇರೆಗೆ ಸುಮಲತಾ ಅವರು ಮಂಡ್ಯ ಜಿಲ್ಲೆಗೆ ಬರಲಿದ್ದಾರೆ. ಒಂದು ವೇಳೆ ಚುನಾವಣೆಯಲ್ಲಿ ಸುಮಲತಾ ಅವರು ಗೆಲುವು ಸಾಧಿಸುವುದು ಖಚಿತವಾದರೆ ಯಶ್ ಮತ್ತು ದರ್ಶನ್ ಕೂಡ ಮಂಡ್ಯಕ್ಕೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ..ಇಷ್ಟು ದಿನ ಕಾಯುತ್ತಿದ್ದ ಫಲಿತಾಂಶ ಇಂದು ಹೊರಬೀಳಲಿದ್ದು ಯಾರ ಪಾಲಿಗೆ ವಿಜಯಮಾಲೆ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments