ವೇದಿಕೆ ಮೇಲೆಯೇ ಜಿ.ಟಿ.ದೇವೇಗೌಡ ವಿರುದ್ಧ ಎಚ್‌ಡಿಕೆ ಕಿಡಿಕಾರಿದ್ಯಾಕೆ..!!

20 May 2019 11:06 AM | Politics
1423 Report

ರಾಜಕೀಯ ವಲಯದಲ್ಲಿ ಯಾವಾಗಲೂ ಒಂದಲ್ಲ ಒಂದು ವಿಷಯಗಳು ಸಿಕ್ಕಾಪಟ್ಟೆ ಸುದ್ದಿಯಲ್ಲಿರುತ್ತವೆ… ಮಾತಿನ ಭರದಲ್ಲಿ ರಾಜಕಾರಣಿಗಳಿಗೆ ಏನು ಮಾತನಾಡುತ್ತೇವೆ ಎಂಬುದರ ಬಗ್ಗೆ ಅರಿವೆ ಇರುವುದಿಲ್ಲ… ಇದೀಗ ಮಾತಿನ ಭರದಲ್ಲಿ  ನಿನ್ನಿಂದಲೇ ಇದೆಲ್ಲಾ ಆಗಿದ್ದು, ಹಾಗಾಗಿ ನಾನು ಮಾತನಾಡಬೇಕಾಯಿತು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಚಿವ ಜಿ.ಟಿ. ದೇವೇಗೌಡ ಅವರಿಗೆ ನೇರವಾಗಿ ಹೇಳಿರುವ ಘಟನೆ ಭಾನುವಾರ ಮೈಸೂರಿನಲ್ಲಿ ನಡೆಯಿತು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಅವರ 'ಸಮುದಾಯ ನಾಯಕರು', 'ಸಮಾಜಮುಖಿ ಶ್ರೀಸಾಮಾನ್ಯರು' ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮೈಸೂರಿನ ಕಲಾಮಂದಿರದಲ್ಲಿ ಮಾತನಾಡಿದ ಮುಖ್ಯಮಂತ್ರಿ,ಕುಮಾರಸ್ವಾಮಿಯವರು ನಿನ್ನೆ ಮೈಸೂರಿಗೆ ಬಂದು ಉಳಿದುಕೊಂಡಿದ್ದೆ. ಇದೇ ಹಿನ್ನಲೆಯಲ್ಲಿ ಕುಮಾರಸ್ವಾಮಿ ಜಿಟಿಡಿ, ಸಾ.ರಾ. ಮಹೇಶ್‌, ಪುಟ್ಟರಾಜು ಅವರನ್ನು ಕರೆಸಿಕೊಂಡು ಮಾತುಕತೆ ನಡೆಸುತ್ತಿದ್ದಾರೆ ಎಂದು ಟಿವಿಗಳಲ್ಲಿ ಧಾರವಾಹಿಯಂತೆ ಪ್ರಸಾರ ಮಾಡಿದರು ಎಂದು ಕುಮಾರಸ್ವಾಮಿಯವರು ತಿಳಿಸಿದರು. ಅಷ್ಟೆ ಅಲ್ಲದೆ ಅಲ್ಲೇ ವೇದಿಕೆಯಲ್ಲಿ ಕುಳಿತಿದ್ದ ಸಚಿವ ಜಿ.ಟಿ. ದೇವೇಗೌಡ ಅವರ ಕಡೆಗೆ ತಿರುಗಿ, ನಿನ್ನಿಂದಲೇ ಇದೆಲ್ಲಾ ಆಗಿದ್ದು, ಹಾಗಾಗಿ ನಾನು ಮಾತನಾಡಬೇಕಾಯಿತು ಎಂದರು. ಬಳಿಕ ತಮ್ಮ ಮಾತು ಮುಂದುವರಿಸಿದರು. ಮಾತಿನ ಭರದಲ್ಲಿ ದೇವೆಗೌಡರಿಗೆ ಕುಮಾರಸ್ವಾಮಿಯವರು ಈ ಮಾತನ್ನು ಯಾಕೆ ಹೇಳಿದರು ಎಂಬುದು ಸದ್ಯಕ್ಕೆ ಯಾರಿಗೂ ಗೊತ್ತಾಗಿಲ್ಲ… ಮೆ 23 ರಂದು ಬರುವ ಲೋಕಸಭಾ ಚುನಾವಣೆಯ ಫಲಿತಾಂಶಕ್ಕಾಗಿ ಎಲ್ಲರೂ ಕೂಡ ಕಾಯುತ್ತಾ ಇದ್ದಾರೆ..ಆದರೆ ಮಂಡ್ಯ ಫಲಿತಾಂಶದ ಬಗ್ಗೆ ಮಾತ್ರ ಕುಮಾರಸ್ವಾಮಿ ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ. ಫಲಿತಾಂಶ ಯಾರ ಪರವಾಗಿ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments