ಸುಮಲತಾ ಪರ ಪ್ರಚಾರದಲ್ಲಿ ರಾಕ್ ಲೈನ್ ವೆಂಕಟೇಶ್ ಹೀಗೆ ಮಾಡಿದ್ದು ಯಾಕೆ..!?

20 May 2019 9:25 AM | Politics
6322 Report

ಈಗಾಗಲೇ ಮಂಡ್ಯ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ದಿನಗಣನೆ ಪ್ರಾರಂಭವಾಗಿದೆ… ಮೇ 23 ರಂದು ಬರುವ ಫಲಿತಾಂಶಕ್ಕಾಗಿ ಎಲ್ಲರೂ ಕೂಡ ಕಾಯುತ್ತಿದ್ದಾರೆ… ಆದರೆ ಮಂಡ್ಯ ಮಾತ್ರ ಲೋಕಸಮರಕ್ಕೂ ಮುನ್ನವೂ ಮತ್ತು ಸಮರದ ನಂತರವು ಕೂಡ ಅಷ್ಟೆ ಸುದ್ದಿ ಮಾಡುತ್ತಿದೆ…ದಿನಕ್ಕೊಂದು ಹೊಸ ಹೊಸ ಸುದ್ದಿ ಕೇಳಿ ಬರುತ್ತಲೇ ಇದೆ. ಇದೀಗ ಮತ್ತೊಂದು ಕೇಳಿ ಬಂದಿದೆ..  ಮಂಡ್ಯ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪ್ರಚಾರಕ್ಕಾಗಿ ಪಡೆದಿದ್ದ ಬಾಡಿಗೆ ವಾಹನಗಳಿಗೆ ರಾಕ್ ಲೈನ್ ವೆಂಕಟೇಶ್ ಬಾಡಿಗೆ ಪಾವತಿಸಿಲ್ಲ ಎಂದು ವಾಹನ ಮಾಲೀಕರು ಮತ್ತು ಚಾಲಕರು ಆರೋಪ ಮಾಡಿದ್ದಾರೆ.

ಮಂಡ್ಯದ ಪಕ್ಷೇತರ ಅಭ್ಯರ್ಥಿಯಾದ ಸುಮಲತಾ ಅಂಬರೀಶ್ ಅವರ ಪರ ಪ್ರಚಾರಕ್ಕೆ 20 ದಿನಗಳವರೆಗೆ ರಾಕ್ ಲೈನ್ ವೆಂಕಟೇಶ್ ವಾಹನಗಳನ್ನು ಬಾಡಿಗೆ ಪಡೆದುಕೊಂಡಿದ್ದರು. ಪೆಟ್ರೋಲ್ ಮತ್ತು ಡೀಸೆಲ್ ಹಾಕಿಸುವ ಜವಾಬ್ದಾರಿಯನ್ನು ಮಾಲೀಕರಿಗೆ ನೀಡಲಾಗಿತ್ತು. ಆದರೆ  ರಾಕ್ ಲೈನ್ ವೆಂಕಟೇಶ್ ಅವರು ಚುನಾವಣಾ ಖರ್ಚುವೆಚ್ಚಗಳನ್ನು ನೋಡಿಕೊಳ್ಳುತ್ತಿದ್ದರು. ಚುನಾವಣೆ ಮುಗಿದ ನಂತರ ವಾಹನಗಳ ಬಾಡಿಗೆ ಹಣ ಕೊಡುವುದಾಗಿ ಹೇಳಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಚುನಾವಣೆ ಮುಗಿದರೂ ವಾಹನಗಳ ಬಾಡಿಗೆ ಮತ್ತು ಪೆಟ್ರೋಲ್, ಡೀಸೆಲ್ ಶುಲ್ಕ ಯಾವುದನ್ನು ಕೂಡ ಪಾವತಿಸಿಲ್ಲ. ಅಷ್ಟೆ ಅಲ್ಲದೇ ರಾಕ್ ಲೈನ್ ವೆಂಕಟೇಶ್ ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಲೋಕಸಭಾ ಚುನಾವಣೆಯ ಫಲಿತಾಂಶ ಬರುವ ಮೊದಲೇ ಬಾಡಿಗೆ ಹಣವನ್ನು ಪಾವತಿಸಬೇಕು ಎಂದು ವಾಹನ ಮಾಲೀಕರು ಹಾಗೂ ಚಾಲಕರು ಒತ್ತಾಯಿಸುತ್ತಿದ್ದಾರೆ ಎನ್ನಲಾಗುತ್ತಿದೆ.. ಒಟ್ಟಿನಲ್ಲಿ ಮಂಡ್ಯ ಅಖಾಡ ಮಾತ್ರ ಹಿಂದೆಂದೂ ಮಾಡಿರದ ಸುದ್ದಿಯನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಾಡಿತ್ತು.

Edited By

Manjula M

Reported By

Manjula M

Comments