ಇಕ್ಕಟ್ಟಿಗೆ ಸಿಲುಕಿದ ಚುನಾವಣಾ ಆಯೋಗ..!! 23 ರಂದು ಮಂಡ್ಯ ಬಂದ್..!?

17 May 2019 1:00 PM | Politics
597 Report

ಮಂಡ್ಯ ಲೋಕಸಭಾ ಅಖಾಡ ಫಲಿತಾಂಶ ಬಂದ ಮೇಲೆ ಮತ್ತಷ್ಟು ಕಾವು ಹೆಚ್ಚಾಗುವುದು ಗ್ಯಾರೆಂಟಿ..ನಿಖಿಲ್ ಮತ್ತು ಸುಮಲತಾ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು…ಮಂಡ್ಯ ಅಖಾಡದಲ್ಲಿ ಯಾರು ಗೆಲ್ಲುತ್ತಾರೋ ಗೊತ್ತಿಲ್ಲ… ಆದರೆ ಫಲಿತಾಂಶದ ದಿನದಂದು ಮಂಡ್ಯದಲ್ಲಿ ಹೇಗೆ ಭದ್ರತೆ ಒದಗಿಸಬೇಕು ಎಂದು ಚುನಾವಣಾ ಆಯೋಗ ತಲೆ ಕೆಡಿಸಿಕೊಂಡಿದೆ.. ಮೇ 23 ಲೋಕಸಭಾ ಚುನಾವಣಾ ಫಲಿತಾಂಶದ ದಿನ ಮಂಡ್ಯ ಭದ್ರತೆ ಬಗ್ಗೆ ಕುರಿತು ಪೊಲೀಸ್ ಮಹಾನಿರ್ದೇಶಕರಿಂದ ಚುನಾವಣಾ ಆಯೋಗ ಮಾಹಿತಿ ಕೇಳಿದೆ. ಇದೇ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ಮತ್ತು ಎಸ್‍ಪಿ ಜೊತೆಗೆ ಪೊಲೀಸ್ ಮಹಾನಿರ್ದೇಶಕರು ಸಭೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಫಲಿತಾಂಶದ ದಿನದಂದು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಯಾವೆಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.. ಅಷ್ಟೆ ಅಲ್ಲದೆ ಅಕ್ಕಪಕ್ಕದ ಜಿಲ್ಲೆಗಳಿಗೂ ಕೂಡ ಬಿಗಿ ಭದ್ರತೆಯನ್ನು ಒದಗಿಸಬೇಕು ಎಂದು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಮೇ 22 ರಿಂದಲೇ ಮಂಡ್ಯ ಜಿಲ್ಲೆಯಾದ್ಯಂತ ಕರ್ನಾಟಕ ಪೊಲೀಸ್ ಜೊತೆಗೆ ಸಿಆರ್‌ಪಿಎಫ್ ಅವರು ಗಸ್ತು ತಿರುಗಲಿದ್ದಾರೆ ಎಂದು ಹೇಳಲಾಗುತ್ತಿದೆ.. ಅಷ್ಟೆ ಅಲ್ಲದೆ ಫಲಿತಾಂಶದ ದಿನದಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸೆಕ್ಷನ್ 144 ಕಫ್ರ್ಯೂಹೇರಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಮಂಡ್ಯದಲ್ಲಿ 22 ರಿಂದಲೇ ಮದ್ಯದಂಗಡಿ ಕೂಡ ಬಂದ್ ಆಗಲಿದ್ದು, ಎರಡು ದಿನಗಳ ಕಾಲ ಮದ್ಯದಂಗಡಿ ಬಂದ್ ಮಾಡಲು ನಿರ್ಧಾರ ಮಾಡಲಾಗಿದೆ. ಒಟ್ಟಿನಲ್ಲಿ ಮಂಡ್ಯ ಕ್ಷೇತ್ರ ಲೋಕಸಭಾ ಚುನಾವಣೆಯಲ್ಲಿ ಹೈವೋಲ್ಟೇಜ್ ಸೃಷ್ಟಿಸಿದ್ದಂತೂ ಸುಳ್ಳಲ್ಲ…

Edited By

Manjula M

Reported By

Manjula M

Comments