ಚುನಾವಣೆಗೆ ಮೊದಲೇ ಸಿಕ್ಕಿತ್ತಾ ನಿಖಿಲ್ ಗೆಲುವಿಗೆ ಮುನ್ಸೂಚನೆ..!!

16 May 2019 12:22 PM | Politics
4288 Report

ಲೋಕಸಭಾ ಚುನಾವಣೆ ಮುಗಿದರೂ ಕೂಡ ಅದರ ಕಾವು ಮಾತ್ರ ಕಡಿಮೆಯಾಗಿಲ್ಲ.. ಹೈವೋಲ್ಟೇಜ್ ಅಖಾಡವಾಗಿದ್ದ ಮಂಡ್ಯ ಜಿಲ್ಲೆ ಮಾತ್ರ ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿತ್ತು.. ದೋಸ್ತಿ ಅಭ್ಯರ್ಥಿಯಾಗಿ ನಿಖಿಲ್ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಖಾಡಕ್ಕೆ ಇಳಿದಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು… ಇಬ್ಬರ ಮಧ್ಯೆ ಭಾರೀ ಪೈಪೋಟಿ ಏರ್ಪಟ್ಟಿತ್ತು… ಚುನಾವಣೆಯು ಮುಗಿದ ಮೇಲೆ ಸಾಕಷ್ಟು ಸಮೀಕ್ಷೆಗಳನ್ನು ನಡೆಸಿ ಗೆಲುವು ಯಾರ ಪರ ಇದೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನ ಮಾಡಿದ್ದಾದರೂ ಎಲ್ಲೆಡೆ ಮಿಶ್ರ ಪ್ರತಿಕ್ರಿಯೆ  ದೊರೆತ್ತಿತ್ತು..

ಆದರೆ ಕೆಲವು ಸ್ವಾಮೀಜಿಗಳು ಸುಮಲತಾ ಗೆ ಗೆಲುವು ಸಿಗುವುದು ಎಂದು ಭವಿಷ್ಯವನ್ನು ಹೇಳಿದ್ದಾರೆ…ಇದಕ್ಕೆ ಪುಷ್ಟಿ ನೀಡುವಂತೆ ಮೊನ್ನೆ ಮೊನ್ನೆ ತಾನೆ ಹೊನ್ನಾದೇವಿ ದೇವರು ಬಲಗಡೆ ಹೂ ಕೊಟ್ಟಿದ್ದು ರಾಜಕೀಯ ವಲಯದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು.. ದೇವರು ಹೂ ನೀಡಿ ಸುಮಲತಾ ಗೆಲ್ಲುತ್ತಾರೆ ಎಂದ ವಿಡಿಯೋ ವೈರಲ್ ಆದ ಬೆನ್ನಲ್ಲೇ ನಿಖಿಲ್ ಗೆಲ್ಲಲಿದ್ದಾರೆ ಎಂಬುದಕ್ಕೆ ಜೆಡಿಎಸ್ ಕಾರ್ಯಕರ್ತರು ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಭಾರತೀನಗರ ಸಮೀಪದ ಹೊನ್ನಾಯಕನಹಳ್ಳಿ ಮಠದ ಸುಪ್ರಸಿದ್ಧ ಬಸವಣ್ಣ ಮೈತ್ರಿ ಅಭ್ಯರ್ಥಿ ನಿಖಿಲ್‌ಕುಮಾರ್‌ಸ್ವಾಮಿಗೆ ಚುನಾವಣಾ ಪ್ರಚಾರದ ವೇಳೆ ಪಾದ ನೀಡಿತ್ತು. ತಮ್ಮ ಇಷ್ಟಾರ್ಥ ನೆರವೇರುವುದಾದರೆ ಮಾತ್ರ ಬಸವಣ್ಣ ಪಾದ ನೀಡುತ್ತಾನೆ. ಹಾಗಾಗಿ ಚುನಾವಣೆ ಪ್ರಚಾರದ ವೇಳೆಯೇ ಬಸವಣ್ಣ ನಿಖಿಲ್‌ಗೆ ಆಶೀರ್ವಾದ ಮಾಡಿದ್ದಾನೆ. ಒಟ್ಟಾರೆಯಾಗಿ ಯಾರ ಭವಿಷ್ಯ ನಿಜವಾಗುತ್ತೋ, ಯಾಋ ಭವಿಷ್ಯ ಸುಳ್ಳಾಗುತ್ತೋ ಗೊತ್ತಿಲ್ಲ.. ಾದರೆ ಮಂಡ್ಯ ಜನತೆ ಯಾರ ಕಡೆ ಮನಸು ಮಾಡಿದ್ದಾರೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

Edited By

Manjula M

Reported By

Manjula M

Comments