ಗಂಡಸ್ಥನ ಇದ್ದರೇ ಸುಮಲತಾ ಪರ ಪ್ರಚಾರ ಮಾಡಿದ್ದು ಒಪ್ಪಿಕೊಳ್ಳಲಿ..!!ಶಾಸಕ ನಾರಾಯಣ ಗೌಡ ಸವಾಲು ಹಾಕಿದ್ದು ಯಾರಿಗೆ..?

15 May 2019 1:00 PM | Politics
1729 Report

ಎಲ್ಲಿ ನೋಡಿದರೂ ಕೂಡ ಮಂಡ್ಯ ಪಕ್ಷೇತರ ಅಭ್ಯರ್ಥಿಯಾದ ಸುಮಲತಾ ಅವರದೇ ಸುದ್ದಿಯಾಗಿದೆ..ರಾಜ್ಯ ರಾಜಕಾರಣದಲ್ಲಿ ಸುಮಲತಾ ಅವರ ಹವಾ ಜೋರಾಗಿಯೇ ಇದೆ.. ಇದೀಗ ಕಾಂಗ್ರೆಸ್ ಮಾಜಿ ಶಾಸಕ ಕೆಬಿ ಚಂದ್ರಶೇಖರ್ ಗೆ ಗಂಡಸ್ಥನ ಇದ್ದರೆ ಸುಮಲತಾ ಪರ ಪ್ರಚಾರ ಮಾಡಿದ್ದನ್ನು ನೇರವಾಗಿ ಒಪ್ಪಿಕೊಳ್ಳಲಿ ಎಂದು ಕೆಆರ್ ಪೇಟೆ ಶಾಸಕ ನಾರಾಯಣ ಗೌಡ ಸವಾಲು ಹಾಕಿದ್ದಾರೆ..

ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರ ಅವರು, ಮಂಡ್ಯ ಲೋಕಸಭಾ ಮೈತ್ರಿ ಅಭ್ಯರ್ಥಿ ನಿಖಿಲ್ ಮತ್ತು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ನೇರವಾಗಿ ಕರೆದಿದ್ರೇ, ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದೆ. ಅವರು ಕರೆಯದ ಕಾರಣ ನಾನು ಬರಲಿಲ್ಲ ಎಂದು ಮಾಜಿ ಶಾಸಕ ಕೆಬಿ ಚಂದ್ರಶೇಖರ್ ತಿಳಿಸಿದ್ದಾರೆ. ಕೆಬಿ ಚಂದ್ರಶೇಖರ್ ಬಳಿ ಮಾತನಾಡಲು ಸ್ವತ: ಹೆಚ್ ಡಿ ರೇವಣ್ಣ ಅವರೇ ಬಂದಿದ್ರು. ಅವರು ಕುಮಾರಸ್ವಾಮಿಯವರು ಅವರಿಗಿಂತ ಹಿರಿಯರು. ಅವರು ಬಂದು ನಿಖಿಲ್ ಪರ ಪ್ರಚಾರ ಮಾಡಲು ಕರೆದ್ರು. ಆದರೆ ಇವರಿಗೆ ನಿಖಿಲ್ ಪರವಾಗಿ ಪ್ರಚಾರ ಮಾಡಲು ಇಷ್ಟ ಇರಲಿಲ್ಲ. ಹೀಗಾಗಿ ನಿಖಿಲ್, ಕುಮಾರಸ್ವಾಮಿ ಬಂದು ಕರೆದಿದ್ರೇ ಬರ್ತಾ ಇದ್ದೆ ಎಂದು ವಿವಾದಾತ್ಮಕವಾದ ಹೇಳಿಕೆ ನೀಡಿದ್ದರು… ಒಟ್ಟಿನಲ್ಲಿ ರಾಜ್ಯ ರಾಜಕಾರಣದಲ್ಲಿ ಸುಮಲತಾ ಹವಾ ಜೋರಾಗಿಯೇ ಇದೆ… ಲೋಕಸಮರ ಫಲಿತಾಂಶ ಬಂದ ಮೇಲೆ ಇನ್ನೂ ಯಾವೆಲ್ಲಾ ರೀತಿಯ ಬದಲಾವಣೆಗಳು ಆಗುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments