ಈ ಮೂರು ಜಿಲ್ಲೆಯಲ್ಲಿ ಜೆಡಿಎಸ್ ಬರೋದು ಗ್ಯಾರೆಂಟಿಯಂತೆ..!!!

11 May 2019 11:35 AM | Politics
4837 Report

ಲೋಕಸಮರದ ಫಲಿತಾಂಶಕ್ಕೆ ದಿನಗಣನೆ ಪ್ರಾರಂಭವಾಗಿದೆ. ಅಖಾಡಕ್ಕೆ ಇಳಿದಿರುವ ಅಭ್ಯರ್ಥಿಗಳು ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ… ಸಾಕಷ್ಟು ಗೊಂದಲಗಳ ನಡುವೆಯೂ ಕೂಡ ಎಚ್ ಡಿ ದೇವೆಗೌಡರು ಮತ್ತು ಅವರ ಮೊಮ್ಮಕಳು ಇಬ್ಬರು ಕೂಡ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದು ಜ್ಯೋತಿಷಿಯೊಬ್ಬರು ಭವಿಷ್ಯವನ್ನು ನುಡಿದಿದ್ದಾರೆ.. ಈಗಾಗಲೇ ಸಾಕಷ್ಟು ಸ್ವಾಮೀಜಿಗಳು ಕೂಡ ರಾಜಕೀಯದ ಭವಿಷ್ಯವನ್ನು ತಿಳಿಸಿದ್ದಾರೆ.

ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರ ನಿವಾಸದಲ್ಲಿ ಶುಕ್ರವಾರ ಮಾತನಾಡಿದ  ದ್ವಾರಕನಾಥ ಸ್ವಾಮೀಜಿ ಹಾಸನ, ಮಂಡ್ಯ ಮತ್ತು ತುಮಕೂರಿ (ಎಚ್‌ಎಂಟಿ)ನಲ್ಲಿ ಜೆಡಿಎಸ್ ಗೆಲುವು ಸಾಧಿಸಲಿದೆ ಎಂಬ ಭವಿಷ್ಯವನ್ನು ನುಡಿದಿದ್ದಾರೆ..ತುಮಕೂರಿನಲ್ಲಿ ದೇವೆಗೌಡರು, ಮಂಡ್ಯದಲ್ಲಿ ನಿಖಿಲ್, ಹಾಸನದಲ್ಲಿ ಪ್ರಜ್ವಲ್ ಖಂಡಿತಾ ಗೆಲುವನ್ನು ಸಾಧಿಸಲಿದ್ದಾರೆ ಎಂದಿದ್ದಾರೆ.. ಆದರೆ ಶಿವಮೊಗ್ಗದಲ್ಲಿ ಮಾತ್ರ ಜೆಡಿಎಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಇದೆ .. ಸಮಬಲದ ಹೋರಾಟ ಇರುವುದರಿಂದ ಯಾರು ಗೆಲ್ಲುತ್ತಾರೆ ಎಂದು ಹೇಳುವುದು ಕಷ್ಟ.. ದೈವ ಇಚ್ಚೆ ಯಾರ ಮೇಲೆ ಇದೆ ಎಂಬುದನ್ನು ಕಾದು ನೋಡಬೇಕಿದೆ ಎಂದರು. ಮತ್ತೆ ಪ್ರಧಾನಿಯಾಗಿ ಮೋದಿಯವರೇ ಬರುವುದು ಎಂದು ಕೂಡ ತಿಳಿಸಿದರು. ಇಂತಹ ಭವಿಷ್ಯಕ್ಕೆಲ್ಲಾ ಮೇ 23 ಕ್ಕೆ ಉತ್ತರ ಸಿಗಲಿದೆ.ಸಾಕಷ್ಟು ಸ್ವಾಮೀಜಿಗಳು ಈಗಾಗಲೇ ಭವಿಷ್ಟಯ ಹೇಳಿದ್ದು ಯಾರ ಭವಿಷ್ಯ ನಿಜವಾಗುತ್ತೋ, ಯಾರ ಭವಿಷ್ಯ ಸುಳ್ಳಾಗುತ್ತೋ ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments