ಫಲಿತಾಂಶ ಬರುವ ಮುನ್ನವೇ ಮಂಡ್ಯದಲ್ಲಿ ನಿಖಿಲ್ ಹೆಗಲ ಮೇಲೆ ಬಿತ್ತು ಹೊಸ ಜವಾಬ್ದಾರಿ..

10 May 2019 12:07 PM | Politics
5319 Report

ಇನ್ನೂ ಲೋಕಸಭಾ ಫಲಿತಾಂಶ ಪ್ರಕಟವಾಗಿಲ್ಲ.. ಆಗಲೇ ನಿಖಿಲ್ ಕುಮಾರಸ್ವಾಮಿ ಹೆಗಲ ಮೇಲೆ ಮತ್ತೊಂದು ಜವಬ್ದಾರಿ ಬಿದ್ದಿದೆ., ಒಂದು ವೇಳೆ ನಿಖಿಲ್ ಸೋತರು ಅವರಿಗೆ ಸಚಿವ ಸ್ಥಾನ ನೀಡಬೇಕು ಅಂದು ಕೆಲವು ಜೆಡಿಎಸ್ ಕಾರ್ಯಕರ್ತರು ತಿಳಿಸಿದ್ದರು..  ಲೋಕಸಭಾ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿ ಇಂದು ಮಂಡ್ಯ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ.

ಮುಂಬರುವ ದಿನಗಳಲ್ಲಿ ಮಂಡ್ಯದಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆ ಜವಾಬ್ದಾರಿಯನ್ನು ನಿಖಿಲ್ ವಹಿಸಿಕೊಂಡಿದ್ದು, ಚುನಾವಣೆ ಮುಕ್ತಾಯವಾದ ನಂತರ 2ನೇ ಬಾರಿ ನಿಖಿಲ್ ಜಿಲ್ಲೆಗೆ ಭೇಟಿ ಮಾಡುತ್ತಿದ್ದಾರೆ. ಕೆ.ಆರ್ ಪೇಟೆಪುರಸಭೆ ಚುನಾವಣೆ ನಡೆಯುತ್ತಿದ್ದು, ಚುನಾವಣಾ ಪೂರ್ವಭಾವಿ ಸಭೆ ಇಂದು ನಡೆಯುತ್ತಿದ್ದು, ಈ ಸಭೆಯಲ್ಲಿ ನಿಖಿಲ್ ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿದಿಬಂದಿದೆ. ಕೆ.ಆರ್ . ಪೇಟೆ ಶಾಸಕ ನಾರಾಯಣ ಗೌಡ ನಿವಾಸದಲ್ಲಿ ಜೆಡಿಎಸ್ ಮುಖಂಡರ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ ರಮೇಶ್ , ಸಚಿವ ಸಿ.ಎಚ್.ಪುಟ್ಟರಾಜು ಪಾಲ್ಗೊಳ್ಳಲಿದ್ದಾರೆ. ಲೋಕಸಭಾ ಯುದ್ದದಲ್ಲಿ ಪಕ್ಷೇತರ ಅಭ್ಯರ್ಥಿಯಾದ ಸುಮಲತಾ ಅವರಿಗೆ ನಿಖಿಲ್ ಸಖತ್ ಪೈಟ್ ಕೊಟ್ಟಿದ್ದಾರೆ.. ಮೇ 23 ಕ್ಕೆ ಇವರಿಬ್ಬರಲ್ಲಿ ಯಾರಿಗೆ ವಿಜಯ ಮಾಲೆ ಬೀಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

 

Edited By

Manjula M

Reported By

Manjula M

Comments