ಸಿಎಂ ವಿರುದ್ದ ಸಿಡಿದೇಳಲು ಕೈ ಶಾಸಕರು ರೆಡಿ..!!

04 May 2019 4:17 PM | Politics
2101 Report

ಲೋಕಸಭಾ ಚುನಾವಣೆಯ ಫಲಿತಾಂಶ ಮೇ 23 ರಂದು ಹೊರ ಬೀಳಲಿದೆ.. ಆದರೆ ಅಷ್ಟರ ಒಳಗೆ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿವೆ.. ಈಗಾಗಲೇ ದೋಸ್ತಿ ಸರ್ಕಾರದಲ್ಲಿ ಒಂದಷ್ಟು ಬದಲಾವಣೆಗಳು ಆಗುತ್ತಿವೆ.. ಒಳಗೊಳಗೆ ಜಗಳಗಳು ಪ್ರಾರಂಭವಾಗಲಿವೆ.. ಆದರೆ ಇದೀಗ ಬ್ರೇಕಿಂಗ್ ಸುದ್ದಿಯೊಂದು ಕೇಳಿ ಬರುತ್ತಿದೆ.

ಫಲಿತಾಂಶ ಬರುವ ಮುನ್ನವೇ ಅಂದ್ರೆ ಮೇ 19 ರಂದು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.. ಎರಡು ವಿಧಾನಸಭಾ ಉಪಚುನಾವಣೆಗೆ ಮತದಾನ ಮುಗಿದ ಬಳಿಕ, ಲೋಕಸಭಾ ಚುನಾವಣೆಯ ಫಲಿತಾಂಶ ಬರುವ ಮೊದಲೇ ಮೈತ್ರಿ ಸರ್ಕಾರದ ವಿರುದ್ಧ ಸಿಡಿದೇಳುವ ಎಲ್ಲಾ ರೀತಿಯ  ತಯಾರಿಯನ್ನು ಈಗಾಗಲೇ ಕಾಂಗ್ರೆಸ್ ನಾಯಕರು ಮಾಡಿದ್ದಾರೆ ಎನ್ನಲಾಗಿದೆ.. ಕಾಂಗ್ರೆಸ್ ಶಾಸಕರು ತಯಾರಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.. ಕೈ ನಾಯಕಿಗೆ ಅಧಿಕಾರವಿದ್ದರೂ ಕೂಡ ಯಾವುದೇ ಅಧಿಕಾರವನ್ನು ಚಲಾಯಿಸುವಂತಿಲ್ಲ… ಹಾಗಾಗಿ ಬಿಡಿಎ ಸೇರಿದಂತೆ ಎಲ್ಲಾ ನಿಗಮ ಮಂಡಳಿಗಳಲ್ಲೂ ಅಧಿಕಾರಿಗಳ ಮೂಲಕ ಸಿಎಂ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಶಾಸಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.  ಹೀಗಾಗಿ  ಅತೃಪ್ತ ಶಾಸಕರು ಸಿಎಂ ವಿರುದ್ದ ತಿರುಗಿ ಬೀಳುವ ಸಾಧ್ಯತೆಯಿದೆ ಎನ್ನಲಾಗಿದೆ.

Edited By

Manjula M

Reported By

Manjula M

Comments