ಸುಮಲತಾ ಜೊತೆ ಕಾಂಗ್ರೆಸ್‌ ನಾಯಕರು..!! ದೋಸ್ತಿ ಸರ್ಕಾರದ ಮುಂದಿನ ನಡೆಯೇನು..?

02 May 2019 10:42 AM | Politics
519 Report

ಮಂಡ್ಯದ ಪಕ್ಷೇತರ ಅಭ್ಯರ್ಥಿಯಾದ ಸುಮಲತಾ ದಿನದಿಂದ ದಿನ್ಕಕೆ ಹೆಚ್ಚು ಸುದ್ದಿಯಾಗುತ್ತಲೇ ಇದ್ದಾರೆ… ಲೋಕಸಮರ ಮುಗಿದು ದಿನಗಳೇ ಕಳೆದರೂ ರಾಜಕೀಯ ವಲಯದಲ್ಲಿ ಇನ್ನು ಸುಮಲತಾ ಎನ್ನುವ ಹೆಸರು ಹೆಚ್ಚು ಕೇಳಿ ಬರುತ್ತಿದೆ..ಇದೀಗ ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಜೊತೆ ಮಂಡ್ಯ ಜಿಲ್ಲಾ ಕಾಂಗ್ರೆಸ್ ನಾಯಕರು ಡಿನ್ನರ್ ಪಾರ್ಟಿ ನಡೆಸಿದ್ದಾರೆ. ಅಷ್ಟೆ ಅಲ್ಲದೆ ಮಾಜಿ ಸಚಿವ ಎನ್.ಚೆಲುವರಾಯಸ್ವಾಮಿ ಟೀಂ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವ ಸಾಧ್ಯತೆಯೂ ಕೂಡ  ಇದೆ ಎಂದು ಹೇಳಲಾಗುತ್ತಿದೆ.

ಹೊಟೇಲ್‌ವೊಂದರಲ್ಲಿ ಸುಮಲತಾ ಜೊತೆ ಕಾಂಗ್ರೆಸ್ ನಾಯಕರು ಮೀಟಿಂಗ್ ನಡೆಸಿದ ವೀಡಿಯೋ ಸಿಕ್ಕಿದ್ದು, ಈ ಬಗ್ಗೆ ವರದಿ ನೀಡುವಂತೆ ಮಂಡ್ಯ ಜಿಲ್ಲಾ ಕಾಂಗ್ರೆಸ್‌ಗೆ ಕೆಪಿಸಿಸಿ ಖಡಕ್ ಸೂಚನೆ ಕೊಟ್ಟಿದೆ.. ಬುಧವಾರ ಮಧ್ಯಾಹ್ನ ಸುಮಲತಾ ಜೊತೆ ಮಂಡ್ಯ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಗಣಿಗ ರವಿಕುಮಾರ್ ಸಭೆ ನಡೆಸಿದ್ದರು. ಇನ್ನು ಗೌಪ್ಯವಾಗಿ ನಡೆದಿದ್ದ ಮೀಟಿಂಗ್‌ನ ವೀಡಿಯೋ  ಇಟ್ಟುಕೊಂಡು ಮೈತ್ರಿ ಸರ್ಕಾರ ಬಂಡಾಯ ನಾಯಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬಹುದು.ಒಟ್ಟಾರೆಯಾಗಿ ಸುಮಲತಾ ಜೊತೆ ಕೈ ಜೋಡಿಸಿರುವ ನಾಯಕರ ವಿರುದ್ದ ದೋಸ್ತಿ ಸರ್ಕಾರ ಯಾವ ರೀತಿಯ ತಿರ್ಮಾನ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ… ಈ ಬಾರಿ ಲೋಕಸಭಾ ಚುನಾವಣೆಯಲ್ಲಿಯೂ ಕೂಡ ಸಾಕಷ್ಟು ದೋಸ್ತಿ ಅಭ್ಯರ್ಥಿಗಳು ಸುಮಲತಾ ಪರ ಕೆಲಸ ಮಾಡಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.

Edited By

Manjula M

Reported By

Manjula M

Comments