ಮಂಡ್ಯದಲ್ಲಿ ನಿಖಿಲ್ ಸೋತರು ಸಿಗುತ್ತಂತೆ ಸಚಿವ ಸ್ಥಾನ..!!

02 May 2019 9:31 AM | Politics
7559 Report

ಈಗಾಗಲೇ ಲೋಕಸಭಾ ಚುನಾವಣೆಯ ಕಾವು ಸ್ವಲ್ಪ ಮಟ್ಟಿಗೆ ಮಾತ್ರ ಕಡಿಮೆಯಾಗಿದೆ. ಪರ್ತಿ ತಣ್ಣಗೆ ಆಗಬೇಕು ಎಂದರೆ ಅದು ಫಲಿತಾಂಶ ಬಂದ ಮೇಲೆಯೆ…ಮಂಡ್ಯ ಲೋಕಸಭಾ ಅಖಾಡ ಎಷ್ಟರ ಮಟ್ಟಿಗೆ ಪ್ರಭಾವ ಬೀರಿತ್ತು ಎಂಬುದು ಎಲ್ಲರಿಗೂ ಕೂಡ ತಿಳಿದೆ ಇದೆ.. ನಿಖಿಲ್ ಹಾಗೂ ಸುಮಲತಾ ಮಧ್ಯೆ ಪ್ರತಿಷ್ಟೆಯ ಪೈಪೋಟಿ ಏರ್ಪಟ್ಟಿತ್ತು… ಇಬ್ಬರಲ್ಲಿ ಮಂಡ್ಯದ ಜನತೆ ಯಾರ ಮೇಲೆ ಒಲವು ತೋರಿಸಿದೆ ಎಂಬುದನ್ನು ಕಾದುನೋಡಬೇಕಿದೆ… ಈಗಾಗಲೇ ನಿಖಿಲ್ ಸೋಲಬಹುದು ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ..

ಇದೇ ಹಿನ್ನಲೆಯಲ್ಲಿ ಒಂದು ವೇಳೆ ನಿಖಿಲ್ ಸೋತರು ಸಚಿವ ಸ್ಥಾನ ನೀಡಬೇಕು ಜೆಡಿಎಸ್ ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದಾರೆ. ಒಂದು ವೇಳೆ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಫಲಿತಾಂಶ ಜೆಡಿಎಸ್‌ಗೆ ವ್ಯತಿರಿಕ್ತವಾಗಿ ಬಂದರೆ ನಿಖಿಲ್ ಕುಮಾರ ಸ್ವಾಮಿ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿಸಬೇಕು ಎಂದು ಮಂಡ್ಯ ಜಿಲ್ಲೆಯ ಜೆಡಿಎಸ್ ನಾಯಕರಿಂದ ಒತ್ತಾಯ ಕೇಳಿಬಂದಿದೆ ಎನ್ನಲಾಗುತ್ತಿದೆ. ಸ್ಥಳೀಯ ಕಾಂಗ್ರೆಸ್ ನಾಯಕರು ಲೋಕಸಭಾ ಚುನಾವಣೆಯಲ್ಲಿ ಕೈಕೊಟ್ಟ ಹಿನ್ನೆಲೆಯಲ್ಲಿ ಒಂದು ವೇಳೆ ನಿಖಿಲ್ ಅವರಿಗೆ ಚುನಾವಣೆಯಲ್ಲಿ ಹಿನ್ನಡೆಯಾದರೆ ಅವರನ್ನು ಸಕ್ರಿಯ ರಾಜಕಾರಣದಲ್ಲಿ ಇರುವಂತೆ ಮಾಡಬೇಕು. ಏಕೆಂದರೆ, ಈ ಚುನಾವಣೆಯಲ್ಲಿ ಒಂದು ವೇಳೆ ಹಿನ್ನಡೆಯಾದರೂ ಅದು ತಾತ್ಕಾಲಿಕವಷ್ಟೆ.. ಅವರು ರಾಜಕೀಯದಲ್ಲಿ ಯಾವಾಗಲೂ ಸಕ್ರಿಯವಾಗಿ ಭಾಗಿಯಾಗಬೇಕು ಎಂಬುದು ಕೆಲವರ ಅಭಿಪ್ರಾಯವಾಗಿದೆ. ಮಂಡ್ಯದಲ್ಲಿ ಅವರು ಯಾವಾಗಲೂ ಸಕ್ರಿಯವಾಗಿ ಭಾಗಿಯಾಗಿವಂತೆ ಮಾಡಬೇಕು .. ಹಾಗಾಗಿ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿಸಿ ಸಚಿವ ಸ್ಥಾನ ನೀಡಬೇಕು ಎಂದಿದ್ದಾರೆ.

Edited By

Manjula M

Reported By

Manjula M

Comments