ಮಂಡ್ಯ ಲೋಕಸಭಾ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲುವು ಗ್ಯಾರೆಂಟಿ..!! ಗೆಲ್ಲುವ ಅಂತರ ಎಷ್ಟು ಗೊತ್ತಾ..? ಹೀಗೊಂದು ವರದಿ ಬಂದಿದ್ದು ಎಲ್ಲಿಂದ ಗೊತ್ತಾ..?

27 Apr 2019 10:18 AM | Politics
12085 Report

ಲೋಕಸಭಾ ಚುನಾವಣೆಯಲ್ಲಿ ಹೈವೋಲ್ಟೇಜ್ ಅಖಾಡವಾಗಿದ್ದು ಮಂಡ್ಯ ಎಲ್ಲರಿಗೂ ಕೂಡ ಗೊತ್ತಿದೆ.ಒಂದು ಕಡೆ ಪಕ್ಷೇತರ ಅಭ್ಯರ್ಥಿ ಸುಮಲತಾ.. ಮತ್ತೊಂದು ಕಡೆ ದೋಸ್ತಿ ಅಭ್ಯರ್ಥಿ ನಿಖಿಲ್.. ಇಬ್ಬರ ಮಧ್ಯೆ ಪ್ರತಿಷ್ಟೆಯ ಸ್ಪರ್ಧೆ ಏರ್ಪಟ್ಟಿತ್ತು… ಸುಮಲತಾ ಪರ ಸ್ಯಾಂಡಲ್ ವುಡ್ ಸ್ಟಾರ್ಸ್ ಗಳು ಒಂದು ಕಡೆ ಕ್ಯಾಂಪೆನ್ ಮಾಡುದ್ರೆ, ನಿಖಿಲ್ ಪರ ರಾಜಕೀಯ ಗಣ್ಯರು ಪ್ರಚಾರ ಮಾಡಿದ್ದರು…

ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ 45 ಸಾವಿರ ಮತಗಳ ಅಂತರದಿಂದ ಜಯ ಗಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ವಿವಿಧ ಕ್ಷೇತ್ರಗಳ ಮಾಹಿತಿ ವರದಿಯನ್ನು ಬಿಜೆಪಿ ಜಿಲ್ಲಾ ಚುನಾವಣಾ ಸಮಿತಿಗಳಿಂದ ರಾಜ್ಯ ಚುನಾವಣಾ ಸಮಿತಿಗೆ ಸಲ್ಲಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಜಿಲ್ಲಾ ಚುನಾವಣಾ ಸಮಿತಿಗಳಿಂದ ಚುನಾವಣೆ ನಿರ್ವಹಣೆಯ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ 45 ಸಾವಿರ ಮತಗಳ ಅಂತರದಿಂದ ಜಯ ಗಳಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಸಮಿತಿಯಿಂದ ವರದಿ ಸಲ್ಲಿಸಲಾಗಿದೆ.. ಒಟ್ಟಿನಲ್ಲಿ ಮಂಡ್ಯ ಅಖಾಡದಲ್ಲಿ ಸುಮಲತಾ ಅವರೇ ಜಯಶಾಲಿಯಾಗಬೇಕು ಎಂಬ ಅಭಿಪ್ರಾಯ ಸಾಕಷ್ಟು ಜನರದ್ದಾಗಿದೆ.. ಆದರೆ ಮಂಡ್ಯ ಜನರ ಒಲವು ಯಾರ  ಮೇಲಿದೆ ಅನ್ನೋದನ್ನ ಮೇ 23 ರವರೆಗೆ ಕಾದುನೋಡ ಬೇಕಿದೆ…

Edited By

Manjula M

Reported By

Manjula M

Comments