ವಿವಾದ ಸೃಷ್ಟಿಸಿದ ಸಿಎಂ ಕುಮಾರಸ್ವಾಮಿಯ ಹೇಳಿಕೆ..!! ಬಿಜೆಪಿಯವರಿಂದ ದಾಖಲಾಯ್ತು ದೂರು..!?

26 Apr 2019 3:06 PM | Politics
9569 Report

ಫೆಬ್ರವರಿ 14 ಇಡೀ ದೇಶವೇ ಪುಲ್ವಾಮ ದಾಳಿಯಿಂದ ತತ್ತರಿಸಿ ಹೋಗಿತ್ತು.. ವೀರ ಯೋಧರು ನಮ್ಮ ದೇಶಕ್ಕಾಗಿ ಪ್ರಾಣವನ್ನು ಕೊಟ್ಟರು.. ಉಗ್ರರ ಸಂಚಿಗೆ ವೀರ ಯೋಧರು ಸಾವನ್ನಪ್ಪಿದ್ದರು.. ಇದೇ ಹಿನ್ನಲೆಯಲ್ಲಿ ಪುಲ್ವಾಮಾ ದಾಳಿ ನಡೆಯುವುದಕ್ಕೂ ಮೊದಲೇ ತಮಗೆ ಗೊತ್ತಿತ್ತು ಎಂದು ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಬಿಜೆಪಿಯ ಎಸ್ ಸಿ ಮೋರ್ಚಾದಿಂದ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ.

ಕೆಲವು ತಿಂಗಳುಗಳ  ಹಿಂದೆ ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಯೋಧರ ವಾಹನವನ್ನು ಸ್ಪೋಟಿಸಿ, ಹತ್ಯೆಗೈದ ಉಗ್ರರ ಸಂಚಿನ ಬಗ್ಗೆ ತಮಗೆ ಮೊದಲೇ ಗೊತ್ತಿತ್ತು ಎಂದು ಘಟನೆಯ ಬಳಿಕ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಈ ಹೇಳಿಕೆಯ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.  ಬಿಜೆಪಿ ಎಸ್ ಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಿ.ನಾ.ರಾಮು ಮತ್ತು ಬಿಜೆಪಿ ಮುಖಂಡರು ಇಂದು ಸಿಎಂ ವಿರುದ್ಧ ವಿಧಾನಸೌಧ ಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ದೂರಿನ ಬಗ್ಗೆ ಮುಂದೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

Edited By

Manjula M

Reported By

Manjula M

Comments