ಇದೇ ನನ್ನ ಕೊನೆಯ ಚುನಾವಣೆ ಎಂದು ಹೇಳಿದ ಬಿಜೆಪಿ ಅಭ್ಯರ್ಥಿ..!!

25 Apr 2019 10:44 AM | Politics
2965 Report

ಲೋಕಸಭಾ ಚುನಾವಣೆಯು ಮುಗಿದ ಮೇಲೆ ಸಾಕಷ್ಟು ಬದಲಾವಣೆಗಳು ಆಗಿವೆ.. ಸಾಕಷ್ಟು ಅತೃಪ್ತ ಶಾಸಕರು ಪಕ್ಷಾಂತರಗೊಂಡಿದ್ದಾರೆ. ಇದೀಗ ಬಿಜೆಪಿಯ ಅಭ್ಯರ್ಥಿಯೊಬ್ಬರು ಇದೇ ನನ್ನ ಕೊನೆಯ ಚುನಾವಣೆ ಎಂದು ತಿಳಿಸಿದ್ದಾರೆ.ನಾನು ಯಾವು​ದೇ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಇದೇ ನನ್ನ ಕಡೇ ಚುನಾ​ವ​ಣೆ​ಯೆಂದು ಘೋಷಿಸಿ​ದ್ದೇನೆ. 2024ಕ್ಕೆ ರಾಜ​ಕೀಯದಿಂದ ನಿವೃತ್ತಿ ಹೊಂದುವೆ ಎಂದು ಬಿಜೆಪಿ ಅಭ್ಯರ್ಥಿ, ಸಂಸದ ಜಿ.ಎಂ.​ಸಿ​ದ್ದೇ​ಶ್ವರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರ ಜೊತೆ  ಮಾತನಾಡಿದ ಜಿಎಂ ಸಿದ್ದೇಶ್ವರ, ಅಭಿವೃದ್ಧಿ ಮಾಡುವುದೆ ಒಂದೇ ನನ್ನ ಗುರಿ..ಜಿಲ್ಲೆಯ ಎಲ್ಲಾ ಕೆರೆ​ಗ​ಳನ್ನು ತುಂಬಿ​ಸ​ಬೇಕು, ಜನ​ರಿಗೆ ಶುದ್ಧ ಕುಡಿ​ಯುವ ನೀರು ಪೂರೈ​ಸ​ಬೇಕು, ಪರ್ಟಿ​ಲೈ​ಸರ್‌ ಫ್ಯಾಕ್ಟರಿ, ಸೆಕೆಂಡ್‌ ಜನ​ರೇ​ಷನ್‌ ಎಥೆ​ನಾಲ್‌ ಘಟಕ ಸ್ಥಾಪ​ನೆ, ದಾವ​ಣ​ಗೆ​ರೆ ರೈಲ್ವೆ ನಿಲ್ದಾ​ಣ ಅಭಿ​ವೃದ್ಧಿ, 2 ರೈಲ್ವೇ ಗೇಟ್‌​ಗಳ ಸಮ​ಸ್ಯೆಗೆ ಮುಕ್ತಿ, ಇಎಸ್‌ ಐ ಆಸ್ಪತ್ರೆ ಕಟ್ಟಡ ನಿರ್ಮಾಣ, ಜಿಲ್ಲಾ​ಸ್ಪತ್ರೆಯಲ್ಲಿ 25 ಕೋಟಿ ವೆಚ್ಚದ ಅಭಿ​ವೃದ್ಧಿ ಕೆಲಸ, 11 ಕೋಟಿ ವೆಚ್ಚ​ದಲ್ಲಿ ಹಳೆ ಹೆರಿಗೆ ಆಸ್ಪ​ತ್ರೆಯ ಅಭಿ​ವೃದ್ಧಿ ನನ್ನ ಗುರಿ​ಯಾ​ಗಿವೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.... ಅಷ್ಟೆ ಅಲ್ಲದೆ ಮೇ 23ರ ವೇಳೆಗೆ ದೋಸ್ತಿ ಸರ್ಕಾ​ರ​ ಇ​ರು​ವು​ದಿ​ಲ್ಲ​ವೆಂಬ ಮಾತು ಎಲ್ಲೆಡೆ ಕೇಳಿ ಬರು​ತ್ತಿದೆ. ರಮೇಶ್ ಜಾರ​ಕಿ​ಹೊಳಿ ಸಹ ಇದೇ ಮಾತು​ ಆ​ಡು​ತ್ತಿ​ದ್ದಾರೆ. ನೋಡೋಣ ಏನು ಆಗುತ್ತ​ದೆಯೋ ಎಂದು ಹೇಳಿದರು. ಒಟ್ಟಾರೆಯಾಗಿ ಮೇ 23 ರಂದು ಬರುವ ಫಲಿತಾಂಶಕ್ಕಾಗಿ ಎಲ್ಲರೂ ಕೂಡ ಕಾಯುತ್ತಿದ್ದಾರೆ. ಯಾರ ಕೊರಳಿಗೆ ಹೂ ಮಾಲೆ ಬೀಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments