ಸುಮಲತಾ ಕಟ್ತಾರ ಹೊಸದೊಂದು ಪಕ್ಷ… ಯಾವ ಪಕ್ಷ ಗೊತ್ತಾ..?

24 Apr 2019 2:56 PM | Politics
3034 Report

ನೆನ್ನೆಯಷ್ಟೆ ಎರಡನೇ ಹಂತದ ಚುನಾವಣೆಯು ಮುಗಿದಿದೆ.. ಇನ್ನೂ ಉಳಿದಿರುವುದು ಫಲಿತಾಂಶ ಮಾತ್ರ.. ಯಾರ ಪಾಲಿಗೆ ಸಿಹಿಯೋ, ಯಾರ ಪಾಲಿಗೆ ಕಹಿಯೋ ಎನ್ನುವುದನ್ನು ಮೇ 23 ರವರೆಗೆ ಕಾದು ನೋಡಬೇಕಿದೆ.. ಆದರೆ ಇದರ ಮಧ್ಯೆ ಒಂದು ಸುದ್ದಿ ಹರಿದಾಡುತ್ತಿದೆ. ಒಂದು ವೇಳೆ ಸುಮಲತಾ ಗೆದ್ದರೆ ಅವರದ್ದೆ ಸ್ವಂತ ಪಕ್ಷ ಕಟ್ತಾರ ಎಂಬ ಪ್ರಶ್ನೆ ಮೂಡಿದೆ. ಮಂಡ್ಯದ ಅಖಾಡ ಹೈವೋಲೇಜ್ಟ್ ಅಖಾಡವಾಗಿ ಬಿಟ್ಟಿತ್ತು, ಪಕ್ಷೇತರ ಅಭ್ಯರ್ಥಿ ಸುಮಲತಾ ಹಾಗೂ ದೋಸ್ತಿ ಅಭ್ಯರ್ಥಿಯಾದ ನಿಖಿಲ್ ಮಧ್ಯೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು…

ಸಾಮಾಜಿಕ ಜಾಲತಾಣದಲ್ಲಿ ಸುಮಲತ ಅವರ ಬೆಂಬಲಿಗರ ಗುಂಪೊಂದು ಒಂದು ವಿಷಯವನ್ನು ಷೇರ್ ಮಾಡಿದ್ದಾರೆ. ಅವರ ಪ್ರಕಾರ ಒಂದು ವೇಳೆ ಮಂಡ್ಯದಲ್ಲಿ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಣೆಯ ನಂತರ ಸುಮಲತ ಅವರೇನಾದರೂ ಈ ಬಾರಿ ಗೆಲುವು ಸಾಧಿಸಿದರೆ, ಅವರು ಮುಂದೆ ತಮ್ಮದೇ ಒಂದು ಹೊಸ ಪಕ್ಷವನ್ನು ಕಟ್ಟಿ ಆ ಪಕ್ಷಕ್ಕೆ ಸ್ವಾಭಿಮಾನಿ ಪಕ್ಷ ಎಂದು ಹೆಸರಿಡುತ್ತಾರಂತೆ ಅಷ್ಟೇ ಅಲ್ಲದೆ  ದರ್ಶನ್, ಯಶ್, ತಮ್ಮ ಪುತ್ರ ಅಭಿಷೇಕ್ ಅವರನ್ನು ರಾಜಕೀಯಕ್ಕೆ ಕರೆ ತರುತ್ತಾರಂತೆ.. ಮಳವಳ್ಳಿಯಲ್ಲಿ ವಿಧಾನಸಭೆಗೆ ದರ್ಶನ್ ಅವರನ್ನು, ಮಂಡ್ಯದಲ್ಲಿ ಯಶ್ ಅವರನ್ನು ಮದ್ದೂರಿನಲ್ಲಿ ಅಭಿಷೇಕ್ ಅವರನ್ನು ಚುನಾವಣೆಗೆ ನಿಲ್ಲಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ..  ಇದರ ಬಗ್ಗೆ ಸುಮಲತಾ ಅವರೇ ಸ್ಪಷ್ಟನೆ ಕೊಡಬೇಕಾಗಿದೆ.

Edited By

Manjula M

Reported By

Manjula M

Comments