ಜೆಡಿಎಸ್ ಭದ್ರಕೋಟೆಯನ್ನು ಛಿದ್ರಮಾಡಲು ಸುಮಲತಾ ಮಾಸ್ಟರ್ ಪ್ಲ್ಯಾನ್..!! ಯಶ್, ದರ್ಶನ್, ಅಭಿ ನವ ಪಕ್ಷದ ನಾಯಕರಾಗ್ತಾರ..!!!!

23 Apr 2019 3:14 PM | Politics
7659 Report

ಇತ್ತಿಚಿಗಷ್ಟೆ  ಲೋಕಸಭಾ ಚುನವಣೆಯು ಮುಗಿದಿದೆ.. ಇನ್ನೂ ಫಲಿತಾಂಶವಷ್ಟೆ ಬಾಕಿ ಉಳಿದಿರುವುದು… ಮಂಡ್ಯದ ಅಖಾಡ ಹೈವೋಲೇಜ್ಟ್ ಅಖಾಡವಾಗಿ ಬಿಟ್ಟಿತ್ತು, ಪಕ್ಷೇತರ ಅಭ್ಯರ್ಥಿ ಸುಮಲತಾ ಹಾಗೂ ದೋಸ್ತಿ ಅಭ್ಯರ್ಥಿಯಾದ ನಿಖಿಲ್ ಮಧ್ಯೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು… ಸುಮಲತಾ ಪರ ಸ್ಯಾಂಡಲ್ ವುಡ್ ನ ಸಾರಥಿಗಳಾದ ಯಶ್ ಮತ್ತು ದರ್ಶನ್ ಕ್ಯಾಂಪೇನ್ ಮಾಡಿದ್ದರು.. ಆದರೆ ಮಂಡ್ಯದ ಒಲವು ಯಾರ ಮೇಲಿತ್ತೋ ಎಂಬುದು ಮೇ 23 ಕ್ಕೆ ತಿಳಿಯುತ್ತದೆ. ಇನ್ನೂ ಕಳೆದ ತಿಂಗಳಿಂದ ಚುನಾವಣೆಯ ಹಿನ್ನಲೆಯಲ್ಲಿ ದರ್ಶನ್ ಮತ್ತು ಯಶ್ ಭರ್ಜರಿ ಪ್ರಚಾರವನ್ನು ಮಾಡುತ್ತಿದ್ದರು.

ಒಂದೆಡೆ ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ ಅವರ ಪತ್ನಿ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದರೆ, ಇನ್ನೊಂದು ಕಡೆ ಹಾಲಿ ಮುಖ್ಯಮಂತ್ರಿ ಯವರ ಪುತ್ರ ಮೈತ್ರಿ ಸರ್ಕಾರದ ಅಭ್ಯರ್ಥಿಯಾಗಿ ಕಣದಲ್ಲಿದ್ದು, ಇದು ಪ್ರತಿಷ್ಠೆಯ ಕಣವಾಗಿ ಪರಿವರ್ತನೆಯಾಗಿ ಬಿಟ್ಟಿತ್ತು.  ಇದೀಗ ಇದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಅಭ್ಯರ್ಥಿಗಳ ಪರ ವಿರೋಧ ಅಭಿಪ್ರಾಯಗಳು ಕಾಣುತ್ತಲೇ ಇವೆ. ಯಾರು ಗೆಲ್ಲಬಹುದು ಎಂಬುದರ ಕುರಿತಾಗಿ ಚರ್ಚೆಗಳು ನಡೆಯುತ್ತಿವೆ. ಹೀಗೆ ನಡೆಯುತ್ತಿರುವ ಚರ್ಚೆಗಳಲ್ಲಿ ಒಂದು ವಿಷಯ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಕಾರಣ ಸುಮಲತ ಅವರ ಬೆಂಬಲಿಗರ ಗುಂಪೊಂದು ಒಂದು ವಿಷಯವನ್ನು ಹಂಚಿಕೊಂಡಿದ್ದಾರೆ.. ಅವರ ಪ್ರಕಾರ ಮಂಡ್ಯದಲ್ಲಿ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಣೆಯ ನಂತರ ಸುಮಲತ ಅವರೇನಾದರೂ ಈ ಬಾರಿ ಗೆಲುವು ಸಾಧಿಸಿದರೆ, ಅವರು ಮುಂದೆ ತಮ್ಮದೇ ಒಂದು ಹೊಸ ಪಕ್ಷವನ್ನು ಕಟ್ಟಿ ಆ ಪಕ್ಷಕ್ಕೆ ಸ್ವಾಭಿಮಾನಿ ಪಕ್ಷ ಎಂದು ಹೆಸರಿಡುತ್ತಾರಂತೆ ಅಷ್ಟೇ ಅಲ್ಲದೆ  ಮಳವಳ್ಳಿಯಲ್ಲಿ ವಿಧಾನಸಭೆಗೆ ದರ್ಶನ್ ಅವರನ್ನು, ಮಂಡ್ಯದಲ್ಲಿ ಯಶ್ ಅವರನ್ನು ಮದ್ದೂರಿನಲ್ಲಿ ಅಭಿಷೇಕ್ ಅವರನ್ನು ಚುನಾವಣೆಗೆ ನಿಲ್ಲಿಸಿದರೆ ಮಂಡ್ಯದಲ್ಲಿ ಇರುವ ದಳಪತಿಗಳ ಕೋಟೆಯನ್ನು ಛಿದ್ರ ಮಾಡಬಹು ಎಂದು ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಇವೆಲ್ಲಾ ಊಹಾ ಪೋಹಾಗಳ ಮಾತೆ  ಆದರೂ, ಸದ್ಯಕ್ಕೆ ‌ಎಲ್ಲರ ಗಮನ ಸೆಳೆದಿರುವುದಂತೂ ನಿಜ.. ಎಲ್ಲರೂ ಕೂಡ ಮೇ 23 ರಂದು ಬರುವ ಫಲಿತಾಂಶಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.

Edited By

Manjula M

Reported By

Manjula M

Comments