ಕಮಲವನ್ನು ಅರಳಿಸಲು ಮುಂದಾದ ಬಾಲಿವುಡ್ ನಟ..!! ಯಾರ್ ಗೊತ್ತಾ..?

23 Apr 2019 2:02 PM | Politics
227 Report

ಲೋಕಸಭಾ ಚುನಾವಣೆಯ ಕಾವು ಸ್ವಲ್ಪ ಮಟ್ಟಿಗೆ ತಣ್ಣಗೆ ಆಗಿದೆ… ಚುನಾವಣೆಯ ಫಲಿತಾಂಶ ಬರುವ ವರೆಗೂ ಕೂಡ ಅದರ ಕಾವು ಆಗೆಯೇ ಇರುತ್ತದೆ.. ಈ ಹಿನ್ನಲೆಯಲ್ಲಿಯೆ  ಸಾಕಷ್ಟು ಮಂದಿ ಪಕ್ಷಾಂತರ ಮಾಡಿದರು… ಇದೀಗ ಮತ್ತೊಬ್ಬರು ಪಕ್ಷ ಬಿಟ್ಟು ಪಕ್ಷವನ್ನು ಸೇರುತ್ತಿದ್ದಾರೆ..ಎಸ್… ಇದೀಗ ಬಾಲಿವುಡ್  ನಟ ಸನ್ನಿ ಡಿಯೋಲ್ ಮಂಗಳವಾರ ಭಾರತೀಯ ಜನತಾ ಪಕ್ಷವನ್ನು ಸೇರ್ಪಡೆಯಾಗಿದ್ದು, ನರೇಂದ್ರ ಮೋದಿ ಮತ್ತೊಮ್ಮೆ ಭಾರತದ ಪ್ರಧಾನಿಯಾಗುವ ಅಗತ್ಯವಿದೆ ಎಂದು ತಿಳಿಸಿದರು.

ನನ್ನ ತಂದೆ ಅಟಲ್‌ಜಿಗೆ ಪ್ರಭಾವಿತರಾದ್ದಂತೆ ಇಂದು ನಾನು ಮೋದಿಜಿಗೆ ಮನಸೋತು ಬಿಜೆಪಿ ಪಕ್ಷಕ್ಕೆ ಸೇರುತ್ತಿದ್ದೇನೆ. ಬಿಜೆಪಿಗೆ ಎಷ್ಟು ಕೊಡುಗೆ ನೀಡಬೇಕೋ ಅಷ್ಟು ನೀಡುವೆ. ನಾನು ಮಾತನಾಡಲಾರೆ. ಕೆಲಸ ಮಾಡಿ ತೋರುತ್ತೇನೆ'' ಎಂದು ಡಿಯೋಲ್ ಪ್ರತಿಕ್ರಿಯಿಸಿದರು.ಬಿಜೆಪಿ ಪಕ್ಷದ ಹಿರಿಯ ನಾಯಕಿ ನಿರ್ಮಲಾ ಸೀತಾರಾಮನ್ ನಟ ಸನ್ನಿ ಡಿಯೋಲ್‌ರನ್ನು ಪಕ್ಷಕ್ಕೆ ಸ್ವಾಗತಿಸಿದರು. ನಮ್ಮ ಪಕ್ಷಕ್ಕೆ ಫೈಯರ್‌ಬ್ರಾಂಡ್ ನಟನನ್ನು ಸ್ವಾಗತಿಸಲು ಸಂತೋಷವಾಗುತ್ತಿದೆ ಎಂದರು. ಒಟ್ಟಾರೆಯಾಗಿ ಮೋದಿಯ ಕಾರ್ಯವನ್ನು ಎಲ್ಲರೂ ಕೂಡ ಶ್ಲಾಘಿಸುತ್ತಿದ್ದಾರೆ… ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೇ ಬೇಕು ಎಂದು ಸಾಕಷ್ಟು ಜನರು ಆಸೆ ಪಡುತ್ತಿದ್ದಾರೆ. 

Edited By

Manjula M

Reported By

Manjula M

Comments