ಫಲಿತಾಂಶ ಬರುವ ಮುನ್ನವೆ ರಾಜಕೀಯ ನಿವೃತ್ತಿ ..!!! ಹೆಚ್.ಡಿ ದೇವೆಗೌಡರು ಹೀಗೆ ಹೇಳಿದ್ಯಾಕೆ..?

19 Apr 2019 1:18 PM | Politics
12582 Report

ಲೋಕಸಭಾ ಚುನಾವಣೆಯ ಕಾವು ನೆನ್ನೆಯಷ್ಟೆ ಸ್ವಲ್ಪ ಮಟ್ಟಿಗೆ ತಣ್ಣಗೆ ಆಗಿದೆ... ಇನ್ನೂ ಎರಡನೇ ಹಂತದ ಚುನಾವಣೆ ಬಾಕಿ ಇದೆ. ಇದೇ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ ಹೆಚ್.ಡಿ.ದೇವೇಗೌಡರು, ಮೂರು ವರ್ಷಗಳ ಹಿಂದೆ ನಾನು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ಮಾತುಗಳನ್ನ ಆಡಿದ್ದೆ. ಆದರೆ ಪರಿಸ್ಥಿತಿಯ ಅನಿವಾರ್ಯತೆಯಿಂದಾಗಿ ಚುನಾವಣೆಯಲ್ಲಿ ಸ್ಪರ್ಧಿಸಬೇಕಾಯಿತು ಎಂದಿದ್ದಾರೆ..

ನನಗೆ ಜೀವನದಲ್ಲಿ ಇನ್ಯಾವುದೇ ಮಹತ್ವಾಕಾಂಕ್ಷೆ ಉಳಿದಿಲ್ಲ. ಆದರೆ, ನಾನೆಂದೂ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದುವುದಿಲ್ಲ ಎಂದು ಮಾಜಿ ಸ್ಪಷ್ಟಪಡಿಸಿದ್ದಾರೆ. ಹೆಚ್.ಡಿ. ದೇವೇಗೌಡರು ಮತ್ತೊಮ್ಮೆ ಪ್ರಧಾನಿಯಾಗುವ ಸಾಧ್ಯತೆ ಇದೆ ಎಂಬ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಇಂತಹ ಯಾವುದೇ ಚಿಂತನೆಗಳಿಲ್ಲ. ರಾಹುಲ್ ಗಾಂಧಿ ಪ್ರಧಾನಿ ಆದಲ್ಲಿ, ಅವರ ಪಕ್ಕದಲ್ಲೇ ಕುಳಿತು ಅವರಿಗೆ ಸಹಕರಿಸುವ ಮೂಲಕ ಸೂಕ್ತ ಮಾರ್ಗದರ್ಶನ ನೀಡುವೆ ಎಂದು ತಿಳಿಸಿದರು..ಒಟ್ಟಾರೆಯಾಗಿ ರಾಜಕೀಯದಲ್ಲಿ ಯಾರು ಯಾವಾಗ ನಿವೃತ್ತಿ ಹೊಂದುತ್ತಾರೋ ಗೊತ್ತಾಗುವುದಿಲ್ಲ.. ಲೋಕಸಭಾ ಚುನಾವಣೇಯ ಹಿನ್ನಲೆಯಲ್ಲಿ ಸಾಕಷ್ಟು ಅಡೆ-ತಡೆಗಳು ಬಂದರೂ ಕೂಡ ಯಾವುದೆ ತೊಂದರೆ ಇಲ್ಲದೆ ಚುನಾವಣೆ ಮುಗಿದಿದೆ... ಒಟ್ಟಿನಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಂದ ಮೇಲೆ ರಾಜಕೀಯ ವಲಯದಲ್ಲಿ ಸಾಕಷ್ಟು ಬದಲಾವಣೆಗಳು ಆಗುವುದರಲ್ಲಿ ನೋಡೌಟ್..

Edited By

Manjula M

Reported By

Manjula M

Comments