ಮೇ 23 ರ ನಂತರ ಸಿಎಂ ಕುಮಾರಸ್ವಾಮಿ ಮಗ ನಿಖಿಲ್ ನಿರುದ್ಯೋಗಿಯಂತೆ..!!!

17 Apr 2019 11:47 AM | Politics
1471 Report

ಇನ್ನೇನು ಲೋಕಸಭಾ ಚುನಾವಣೆ ಬಂದೆ ಬಿಡ್ತು... ಇಡೀ ಇಂಡಿಯಾವೇ ಮಂಡ್ಯದತ್ತ ನೋಡುವಂತೆ ಆಗಿದೆ.. ಮಂಡ್ಯದ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ.. ಒಂದು ಕಡೆ ದೋಸ್ತಿ ಅಭ್ಯರ್ಥಿಗಳ ಪರವಾಗಿ ನಿಖಿಲ್ ಕುಮಾರಸ್ವಾಮಿ, ಮತ್ತೊಂದು ಕಡೆ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಖಾಡಕ್ಕೆ ಇಳಿದಿದ್ದಾರೆ.. ಇಬ್ಬರ ಮಧ್ಯೆಯು ಕೂಡ ಭರ್ಜರಿ ಜಿದ್ದಾಜಿದ್ದಿ ಏರ್ಪಟ್ಟಿದೆ.. ಮಂಡ್ಯ ಅಖಾಡ ಅಕ್ಷರಸಹ ರಣರಂಗವಾಗಿ ಬಿಟ್ಟಿದೆ.. ಒಬ್ಬರಿಗೆ ಒಬ್ಬರು ಟಾಂಗ್ ಕೊಟ್ಟುಕೊಂಡೆ ಪ್ರಚಾರ ಮಾಡುತ್ತಿದ್ದಾರೆ.. ಇದರ ನಡುವೆ ಸಿಎಂ ಕುಮಾರಸ್ವಾಮಿ ಯೋಧರ ಬಗ್ಗೆ ಹೇಳಿದ ಒಂದು ಮಾತು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಯಿತು.

ಲೋಕಸಭಾ ಚುನಾವಣೆ ನಂತರ ಕುಮಾರಸ್ವಾಮಿ ಪುತ್ರ ನಿರುದ್ಯೋಗಿ ಆಗೋದು ಗ್ಯಾರಂಟಿ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವ್ಯಂಗ್ಯ ಮಾತುಗಳನ್ನು ಆಡಿದ್ದಾರೆ. .ವಿಜಯಪುರ ನಗರದಲ್ಲಿ ನಡೆದ ಪ್ರಬುದ್ಧರ ಜತೆ ಸಂವಾದ ಕಾರ್ಯಕ್ರಮದಲ್ಲಿ ಚುನಾವಣೆ ನಂತ್ರ ಸಿಎಂ ಕುಮಾರಸ್ವಾಮಿ ಮಗ ನಿಖಿಲ್ ನಿರುದ್ಯೋಗಿ ಆಗೋದು ಪಕ್ಕಾ. ಚುನಾವಣೆಯಲ್ಲಿ‌ ನಿಖಿಲ್ ಗೆಲ್ಲಲ್ಲ, ನಿಖಿಲ್ ಮಾಡುವ ಸಿನಿಮಾ ಓಡಲ್ಲ ಎಂದು ಲೇವಡಿ ಮಾಡಿದರು. 23ರ ನಂತ್ರ ನಿಖಿಲ್ ನಿರುದ್ಯೋಗಿ ಆಗೋದು ಗ್ಯಾರಂಟಿ. ಆಗ ಕುಮಾರಸ್ವಾಮಿ ನಿಖಿಲ್ ನನ್ನ ಸೇನೆಗೆ ಸೇರಿಸಲಿ. ಅಲ್ಲಿ ಪರಿಸ್ಥಿತಿ ಹೇಗಿರುತ್ತೆ ಅನ್ನೋದು ಆಗ ಗೊತ್ತಾಗುತ್ತೆ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. ಮಗನನ್ನು ಸೈನ್ಯಕ್ಕೆ ಸೇರಿಸಲಿ, ಶತ್ರುಗಳ ವಿರುದ್ದ ಎದೆಯೊಡ್ಡಿ ನಿಲ್ಲಲ್ಲಿ.. ಅದನ್ನ ಬಿಟ್ಟು ಕುಮಾರಸ್ವಾಮಿಯವರು ಯೋಧರ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ ಎಂದರು.

 

Edited By

Manjula M

Reported By

Manjula M

Comments