ಬಹಿರಂಗವಾಗಿ ಕ್ಷಮೆ ಕೇಳಿದ ಸಚಿವ ಪುಟ್ಟರಾಜು'..!! ಕಾರಣ ಏನ್ ಗೊತ್ತಾ..?

12 Apr 2019 4:09 PM | Politics
324 Report

ರಾಜಕೀಯನೇ ಇಷ್ಟು ನೋಡಿ... ಇಂದು ಹಾವು ಮುಂಗುಸಿ ತರ ಇರೋರು, ನಾಳೆ ಖಾಸಾ ದೋಸ್ತಿಗಳು ಆಗಿ ಬಿಡುತ್ತಾರೆ.. ಪ್ರಚಾರದ ವೇಳೆ ಒಬ್ಬರಿಗೆ ಒಬ್ಬರು ಟಾಂಗ್ ಕೊಟ್ಟುಕೊಂಡು ದ್ವೇಷ ಕಟ್ಟಿಕೊಂಡಿರುತ್ತಾರೆ. ಯಾವ ಸಮಯದಲ್ಲಿ ಯಾವ ರೀತಿಯ ಮಾತುಗಳು ಬರುತ್ತವೆ ಎಂಬುದೇ ತಿಳಿಯುವುದಿಲ್ಲ.. ಇದೇ ಹಿನ್ನಲೆಯಲ್ಲಿ ನೋಡುವುದಾದರೆ ಕೆಲ ದಿನಗಳ ಹಿಂದೆ ಡೆಡ್ ಹಾರ್ಸ್ ಗಳೆಲ್ಲಾ ಮಾತನಾಡುವ ಹಾಗಾಗಿದೆ ಅಂತ ಮಾಜಿ ಸಚಿವ ಚೆಲುವರಾಯಸ್ವಾಮಿ ಅವರನ್ನು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಸತ್ತ ಕುದುರೆಗೆ ಹೋಲಿಕೆ ಮಾಡಿದ್ದರು.. ಆ ಮಾತು ತೀರ್ವ ಚರ್ಚೆಗೆ ಗ್ರಾಸವಾಗಿತ್ತು.

ಸಚಿವ ಸಿ.ಎಸ್.ಪುಟ್ಟರಾಜು ಆಡಿದ ಈ ಮಾತಿನಿಂದ ನಾಗಮಂಗಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಚೆಲುವರಾಯಸ್ವಾಮಿ ಅವರು ಸಿಟ್ಟಾಗಿದ್ದರು. ಇದೇ ವೇಳೆ ಇಂದು ನಾಗಮಂಗಲದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ ಮೈತ್ರಿ ಅಭ್ಯರ್ಥಿ ಜೆಡಿಎಸ್‌ ನ ನಿಖಿಲ್ ಪರವಾಗಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ್ರು ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಮಯದಲ್ಲಿ ಮಾತನಾಡಿದ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಕ್ಷಮಿಸಿ ಚೆಲುವಣ್ಣ ಅಂತ ಹೇಳುವುದರ ಮೂಲಕ ತಮ್ಮ ಡೆಡ್ ಹಾರ್ಸ್ ಹೇಳಿಕೆಗೆ ಬೇಸರ ವ್ಯಕ್ತಪಡಿಸಿ ಕ್ಷಮೆ ಕೋರಿದರು. ಮಾತನಾಡುವಾಗ ಹಿಂದೆ ಮುಂದೆ ನೋಡದೆ ಮಾತನಾಡಿ ಬಿಡುವುದು, ತದ ನಂತರ ಸಾರಿ ಕೇಳುವುದು.. ಇದೆಲ್ಲವನ್ನೂ ನೋಡುತ್ತಿದ್ದರೆ ರಾಜಕೀಯ ಎನ್ನುವುದು ದೊಂಬರಾಟ ಎನ್ನುವುದು ಪದೇ ಪದೇ ಸಾಬೀತಾಗುತ್ತದೆ. ಒಟ್ಟಾರೆಯಾಗಿ ಲೋಕಸಮರ ಮುಗಿಯುವುದರೊಳಗೆ ಏನೇನು ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments