'ತೆನೆ' ಗೆ ಕೈ ಕೊಟ್ಟು 'ಕಮಲ' ಅರಳಿಸಿದ ಶಾಸಕರು..!!

12 Apr 2019 3:21 PM | Politics
4860 Report

ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇದೇ ಸಮಯದಲ್ಲಿ ಸಾಕಷ್ಟು ಜನರು ಪಕ್ಷ ಬಿಟ್ಟು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ.. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹಲವು ಮುಖಂಡರು ಪಕ್ಷಾಂತರ ಮಾಡುವುದು ಕಾಮನ್ ಆಗಿ ಬಿಟ್ಟಿದೆ. ಪಕ್ಷ ತೊರೆಯುವುದು, ಮತ್ತೊಂದುಯ ಪಕ್ಷವನ್ನು ಸೇರಿಕೊಳ್ಳುವುದು ಒಂಥರಾ ಮಕ್ಕಳ ಆಟದಂತೆ ಆಗಿ ಬಿಟ್ಟಿದೆ. ಚಾಮರಾಜನಗರದಲ್ಲಿ ಕುರುಬ ಸಮುದಾಯದ ಜೆಡಿಎಸ್ ಮುಖಂಡರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಮುಸುವಿನಕೊಪ್ಪಲು ಗ್ರಾಮದ ಮುಖಂಡರು ಚುನಾವಣೆ ಬೆನ್ನಲ್ಲೇ ಜೆಡಿಎಸ್ ಗೆ ಶಾಕ್ ನೀಡಿದ್ದಾರೆ.. ಬಿಜೆಪಿ ಮುಖಂಡ ಸಿ.ಬಸವೇಗೌಡ ಮತ್ತು ಜಿಪಂ ಮಾಜಿ ಉಪಾಧ್ಯಕ್ಷ ನಟರಾಜು ನೇತೃತ್ವದಲ್ಲಿ ಜೆಡಿಎಸ್ ಪುಟ್ಟಸ್ವಾಮಿ, ಆನಂದ್, ಮಹದೇವು ಬಿಜೆಪಿಯ ಪಕ್ಷವನ್ನು ಸೇರಿಕೊಂಡಿದ್ದಾರೆ. ಬಿಜೆಪಿ ಪಕ್ಷವನ್ನು ಸೇರಿದ ನಂತರ ಮಾತನಾಡಿದ ಮುಖಂಡರು ಪಕ್ಷದ ಆಡಳಿತಕ್ಕೆ ಬೇಸತ್ತು ಕಮಲ ಪಡೆ ಸೇರಿದ್ದಾಗಿ ಹೇಳಿದ್ದಾರೆ. ಅಲ್ಲದೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ನಮ್ಮ ಬೆಂಬಲ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮೈತ್ರಿಗೆ ನಮ್ಮ ಬೆಂಬಲ ಇರುವುದಿಲ್ಲ ಎಂದು ಹೇಳಿದರು. ಒಟ್ಟಾರೆಯಾಗಿ ಲೋಕಸಭಾ ಹಿನ್ನಲೆಯಲ್ಲಿ ಈ ರೀತಿ ದೋಸ್ತಿಗಳು ಪಕ್ಷವನ್ನು ತೊರೆಯುತ್ತಿರುವುದು ಪಕ್ಷಕ್ಕೆ ಹಿನ್ನಡೆ ಉಂಟಾಗಬಹುದು ಎಂದು ಊಹಿಸಲಾಗಿದೆ

Edited By

Manjula M

Reported By

Manjula M

Comments