ಕೊನೆಗೂ ವರ್ಕೌಟ್ ಆಯ್ತು ಡಿಕೆ ಶಿವಕುಮಾರ್ ಮಾಸ್ಟರ್ ಫ್ಲ್ಯಾನ್..!!

11 Apr 2019 12:35 PM | Politics
255 Report

ಈಗಾಗಲೇ ಮೈತ್ರಿ ಸರ್ಕಾರವನ್ನು ರಚಿಸಿಕೊಂಡಿರುವ ಜೆಡಿಎಸ್ ಗೆ ಮತ್ತು ಕಾಂಗ್ರೆಸ್ ಸಂಕಷ್ಟಗಳು ಎದುರಾಗಿವೆ... ಅದರಲ್ಲೂ ಕಾಂಗ್ರೆಸ್ ಗೆಲುವಿಗೆ ಹರಸಾಹಸವನ್ನೆ ಪಡುತ್ತಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲೇ ಬೇಕು ಎಂಬ ಹುಮ್ಮಸಿನಿಂದ ಕೆಲಸ ಕಾರ್ಯಗಳಲ್ಲಿ ತೊಡಗಿದ್ದಾರೆ. ಆದರೆ ಬಳ್ಳಾರಿಯಲ್ಲಿ ಕಾಂಗ್ರೆಸ್ ಗೆಲುವಿಗೆ ಒಂದಿಷ್ಟು ತೊಡಕುಗಳು ಎದುರಾಗಿವೆ.. ಅವುಗಳನ್ನು ಸರಿಪಡಿಸಲು ಡಿಕೆ ಶಿವಕುಮಾರ್ ಮುಂದಾಗಿದ್ದಾರೆ.

ಬಳ್ಳಾರಿಯಲ್ಲಿ ಕಾಂಗ್ರೆಸ್‍ಗೆ ಸಾಕಷ್ಟು ಸಂಕಷ್ಟಗಳು ಎದುರಾಗಿವೆ. . ಅಷ್ಟೇ ಅಲ್ಲದೆ ಪಕ್ಷದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ ಅಸಮಾಧಾನಗಳು ತಲೆ ಎತ್ತಿವೆ... ಈ ಎಲ್ಲ ವಿಷಯಗಳನ್ನು ಮನಗೊಂಡ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಅವರು ಅಖಾಡಕ್ಕೆ ಇಳಿದಿದ್ದಾರೆ..ಕಳೆದ ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಈಗ ಬಳ್ಳಾರಿ ಜಿಲ್ಲೆಯಲ್ಲಿನ ಕಾಂಗ್ರೆಸ್ ಗೆಲುವಿಗೆ ಹೋರಾಡುತ್ತಿದ್ದಾರೆ..ಪಕ್ಷದವರ ಮಧ್ಯೆಯಲ್ಲಿದ್ದ ವೈ ಮನಸ್ಸು ಸರಿ ಪಡಿಸಲು ಡಿಕೆಶಿ ಮುಂದಾಗಿದ್ದಾರೆ.ಈಗಾಗಲೇ ಬಳ್ಳಾರಿ ಜಿಲ್ಲೆಯ ಇಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ. ಇದು ರೊಟೇಷನ್ ರೀತಿ ಕೊಡಲಾಗುವುದು ಎಂದು ಡಿಕೆಶಿ ಅವರು ಸಂಡೂರು ಸಭೆಯಲ್ಲಿನ ತಮ್ಮ ಭಾಷಣದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಸಚಿವ ಸ್ಥಾನ ಸಿಗದಿದ್ದಕ್ಕೆ ಮುನಿಸಿಕೊಂಡಿದ್ದ ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ, ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಭೀಮಾನಾಯ್ಕ್ ಅವರುಗಳು ಡಿಕೆಶಿ ನೀಡಿರುವ ಟಾಸ್ಕ್ ಗೆ ಒಪ್ಪಿಗೆ ಸೂಚಿಸಿದಂತಿದೆ. ಪ್ರಚಾರ ಮಾಡೋದಿಲ್ಲವೆಂದಿದ್ದ ಭೀಮಾನಾಯ್ಕ್ ಇದೀಗ ಕೈ ಅಭ್ಯರ್ಥಿ ಉಗ್ರಪ್ಪ ಪರ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಪ್ರಚಾರ ಮಾಡುತ್ತಿದ್ದಾರೆ.ಶಾಸಕ ಭೀಮಾನಾಯ್ಕ್ ಹಾಗೂ ನಾಗೇಂದ್ರ ಅವರನ್ನು ಡಿ.ಕೆ.ಶಿವಕುಮಾರ್ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ರೆಸಾರ್ಟ್‍ನಲ್ಲಿನ ಬಡಿದಾಟ ಪ್ರಕರಣದ ಕೈ ಶಾಸಕರಾದ ಆನಂದ್‍ಸಿಂಗ್ ಸಹ ಹೊಸಪೇಟೆಯಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಒಂದು ಮಟ್ಟಿಗೆ ಇದ್ದ ವೈ ಮನಸ್ಸನ್ನು ಡಿಕೆಶಿ ದೂರ ಮಾಡಿದ್ದಾರೆ.. ಇವರ ಈ ಮಾಸ್ಟರ್ ಫ್ಲ್ಯಾನ್ ವರ್ಕೌಟ್ ಆಗುತ್ತೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

 

Edited By

Manjula M

Reported By

Manjula M

Comments