ಸುಮಲತಾ ಸೋಲಿಗೆ ಕಾರಣವಾಗುತ್ತಾ ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟಿರುವ ‘ಆ’ ಹೇಳಿಕೆ..!!

10 Apr 2019 11:21 AM | Politics
1793 Report

ಮಂಡ್ಯ ಜಿಲ್ಲೆಯ ಲೋಕಸಮರಕ್ಕೆ ಇದೀಗ ಟ್ವಿಸ್ಟ್ ಸಿಕ್ಕಂತೆ ಆಗಿದೆ. ಮಂಡ್ಯ ಜನತೆಗೆ ಸುಮಲತ ಮೇಲೆ ಇದ್ದ ಒಲವು ಯಾಕೋ ಕಡಿಮೆ ಆದಂತೆ ಕಾಣುತ್ತಿದೆ.. ಇದೀಗ ಮಂಡ್ಯದ ಪಕ್ಷೇತರ ಅಭ್ಯರ್ಥಿಯಾದ ಸುಮಲತಾಗೆ ವೋಟ್ ಹಾಕಲ್ಲ, ನಾವು ಬೆಂಬಲವನ್ನು ಸೂಚಿಸುವುದಿಲ್ಲ ಎಂದು ಮುಸ್ಲಿಂರು ಬಹಿರಂಗವಾಗಿಯೇ ಹೇಳಿಕೆಯನ್ನು ಕೊಟ್ಟಿದ್ದಾರೆ. ಪ್ರಧಾನ ಮಂತ್ರಿಯಾಗಿರುವ ನರೇಂದ್ರ ಮೋದಿಯವರೇ ಅಧಿಕೃತವಾಗಿ ತಿಳಿಸಿದ್ದಾರೆ. ಸುಮಲತಾ ಅವರಿಗೆ ಆಶೀರ್ವಾದ ಮಾಡಿ, ನನಗೆ ಶಕ್ತಿ ತುಂಬಿ ಎಂದು.. ಅಲ್ಲಿಗೆ ಅವರು ಬಿಜೆಪಿ ಅಭ್ಯರ್ಥಿ ಎಂದು ಅವರೇ ಒಪ್ಪಿಕೊಂಡಂತೆ ಆಯಿತು. ಹೀಗಾಗಿ ಪಕ್ಷೇತರ ಅಭ್ಯರ್ಥಿಗೆ ನಾವು ವೋಟ್ ಹಾಕಲ್ಲ ಎಂದು ಮುಸ್ಲಿಂ ಬಾಂಧವರು ತಿಳಿಸಿದ್ದಾರೆ..

ಅಂಬರೀಶ್ ಅಭಿಮಾನಿಗಳಾಗಿರುವ ನಮಗೆ ಮೊದಲೇ ಗೊಂದಲ ಇತ್ತು. ಅಣ್ಣ ಚಿರಸ್ಮರಣೆ ಆಗಿದ್ದರೂ ಕೂಡ ಅವರು ನಮ್ಮ ಮನದಲ್ಲಿ ಉಳಿದುಕೊಂಡಿದ್ದಾರೆ. ಹೀಗಾಗಿ ಅವರ ಮುಖಾಂತರ ನಾವು ಸುಮಲತಾ ಅವರಿಗೆ ಬೆಂಬಲ ಕೊಡಬೇಕು ಅಂದುಕೊಂಡಿದ್ದೆವು. ಆದ್ರೆ ಇದೀಗ ಮೋದಿ ಕೊಟ್ಟಿರುವ ಹೇಳಿಕೆ ಗಮನಿಸಿದರೆ ಸುಮಲತಾ ಅವರು ಬಿಜೆಪಿ ಕ್ಯಾಂಡಿಡೇಟ್ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಮುಸ್ಲಿಂ ಸಮುದಾಯವನ್ನು ಬಿಜೆಪಿಯವರು ಟಾರ್ಗೆಟ್ ಮಾಡುತ್ತಾರೆ. ಜಾತಿ ರಾಜಕೀಯ ಮಾಡುತ್ತಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಮುಸ್ಲಿಂ ಜನಾಂಗ ಬಿಜೆಪಿಗೆ ವೋಟ್ ಹಾಕಲ್ಲ. ಇಲ್ಲಿ ನಾವು ವ್ಯಕ್ತಿ ನೋಡಲ್ಲ ನಾವು ಪಕ್ಷ ನೋಡುತ್ತೇವೆ. ನಮಗೆ ಮೊದಲು ಬೇಕಾಗಿರೋದು ದೇಶ, ನಂತರ ಪಕ್ಷ, ಆ ಬಳಿಕ ವ್ಯಕ್ತಿ ವಿನಃ ವ್ಯಕ್ತಿಯಿಂದ ಪಕ್ಷ ನೋಡಲ್ಲ ಎಂದು ಹೇಳಿದ್ರು.  ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟಿರುವ ಈ ಹೇಳಿಕೆ ಸುಮಲತಾ ಅವರ ಸೋಲಿಗೆ ಕಾರಣವಾಗುತ್ತಾ ಎಂಬುದನ್ನುಕಾದು ನೋಡಬೇಕಿದೆ.

Edited By

Manjula M

Reported By

Manjula M

Comments