ಬಿಜೆಪಿ ಅಭ್ಯರ್ಥಿ ಎ.ಮಂಜು ಸೋಲಿಸಲು ಬಿಜೆಪಿ ಶಾಸಕನಿಂದಲೇ ಬಿಗ್ ಮಾಸ್ಟರ್ ಪ್ಲಾನ್..!?

09 Apr 2019 12:25 PM | Politics
2888 Report

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಾಕಷ್ಟು ಗೊಂದಲಗಳು ಸೃಷ್ಟಿಯಾಗುತ್ತಿವೆ.. ತಮ್ಮ ತಮ್ಮ ಪಕ್ಷಗಳ ಒಳಗೊಳಗೆಯೇ ಯುದ್ದಗಳು ಶುರುವಾಗಿ ಬಿಟ್ಟಿವೆ.. ಲೋಕ ಸಮರದ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದೀಗ ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಗೆಲ್ಲೋದಿಲ್ಲ ಎಂದು ಶಾಸಕ ಪ್ರೀತಂಗೌಡ ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ವೈರಲ್ ಆಗಿದೆ.

ಇದೀಗ ಸದ್ಯ ವೈರಲ್ ಆಗಿರುವ 1.39 ನಿಮಿಷದ ಆಡಿಯೋದಲ್ಲಿ ಕಾರ್ಯಕರ್ತ ಹಾಗೂ ಶಾಸಕರ ನಡುವೆ ಸಂಭಾಷಣೆ ನಡೆದಿದೆ ಎನ್ನಲಾಗಿದ್ದು, ಇದರಲ್ಲಿ ಏಳು ತಿಂಗಳ ಹಿಂದೆ ಎ.ಮಂಜು ಹಾಕಿಸಿದ ಪೊಲೀಸ್ ಕೇಸ್ ನ್ನು ಬಿಜೆಪಿ ಮರೆತಿಲ್ಲ. ಎ. ಮಂಜು ಎರಡು ಲಕ್ಷ ಎಂಬತ್ತು ಸಾವಿರ ಲೀಡ್ ನಲ್ಲಿ ಸೋತ ಬಳಿಕ ಮತ್ತೆ ಸಿದ್ದರಾಮಯ್ಯ ಹತ್ತಿರ ಹೋಗ್ತಾರೆ ಎಂದು ಆಡಿಯೋದಲ್ಲಿ ಹೇಳಲಾಗಿದೆ. ವೈರಲ್ ಆಗಿರುವ ಆಡಿಯೋದಲ್ಲಿ ಹಾಸನ ಬಿಜೆಪಿ ಅಭ್ಯರ್ಥಿ ಎ.ಮಂಜು ಸೋಲಿಗೆ ಶಾಸಕ ಪ್ರೀತಂ ಗೌಡ ಸ್ಕೆಚ್ ಹಾಕಿದ್ದಾರಾ ಎಂಬ ಪ್ರಶ್ನೆ ಕಾಡುತ್ತಿದೆ. ಮೇಲ್ನೋಟ್ಟಕ್ಕೆ ಪಕ್ಷಗಳು ಸರಿಯಾಗಿದ್ದರೂ ಕೂಡ ಒಳಗೊಳಗೆ ತಮ್ಮತಮ್ಮ ಅಭ್ಯರ್ಥಿಗಳ ವಿರುದ್ದ ಸಂಚು ಹಾಕುತ್ತಿದ್ದರಾ ಎಂಬ ಪ್ರಶ್ನೆ  ಮೂಡಿದೆ. ಹಾಸನದಲ್ಲಿ ದೋಸ್ತಿ ಅಭ್ಯರ್ಥಿಯಾದ ಪ್ರಜ್ವಲ್ ವಿರುದ್ದ ಕಣಕ್ಕಿಳಿದಿರುವ ಎ ಮಂಜು ಗೆಲುವಿಗೆ ತಮ್ಮ ಪಕ್ಷದವರೆ ತೊಡಕು ಉಂಟು ಮಾಡುತ್ತಿದ್ದಾರೆ ಎಂಬ ಅನುಮಾನ ಇದೀಗ ಎಲ್ಲರಲ್ಲಿಯೂ ಮೂಡಿದೆ.

Edited By

Manjula M

Reported By

Manjula M

Comments