ಸುಮಲತಾ ರವರಿಗೆ ಬಿತ್ತು ಮೊದಲ ವೋಟ್..!! ಯಾರಿಂದ ಯಾವಾಗ ಗೊತ್ತಾ..?

09 Apr 2019 10:53 AM | Politics
703 Report

ಮಂಡ್ಯ ಲೋಕಸಭಾ ಅಖಾಡ ದಿನದಿಂದ ದಿನಕ್ಕೆ ಹೆಚ್ಚು ಸುದ್ದಿಯಾಗುತ್ತಲೇ ಇದೆ.. ನಿಖಿಲ್ ವಿರುದ್ಧ ಸುಮಲತಾ ಅಂಬರೀಶ್ ಕಣಕ್ಕೆ ಇಳಿದಿರುವುದೇ ಇದಕ್ಕೆಲ್ಲಾ ಕಾರಣನಾ ಎನ್ನುವಂತೆ ಆಗಿದೆ.. ನಿಖಿಲ್ ದೋಸ್ತಿ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದರೆ, ಸುಮಲತಾ ಸ್ವತಂತ್ರ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿದ್ದಾರೆ. ಈಗಾಗಲೇ ಸುಮಲತಾ ಗೆಲವು  ನಿಶ್ಚಿತ ಎಂದು ರಾಜಕೀಯದಲ್ಲೆ ಸಾಕಷ್ಟು ಮಂದಿ ಮಾತಾನಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಪುಷ್ಟಿ ನೀಡುವಂತೆ  ನಮ್ಮ ದೇಶ ಕಾಯುವ ಯೋಧ ಮಂಡ್ಯ ಜಿಲ್ಲೆಯ ನಾಯಕ್ ರವರು ಯುಗಾದಿ ಹಬ್ಬದ ದಿನ ಸುಮಲತಾ ರವರಿಗೆ ಮತದಾನ ಮಾಡಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ಅವರ ವಿರುದ್ಧ ನೇರ ಸ್ಪರ್ಧೆ ಏರ್ಪಟ್ಟಿದೆ. ಮೊದಲಿನಿಂದಲೂ ಕುಮಾರಸ್ವಾಮಿರವರ ಮಗ ನಿಖಿಲ್ ಕುಮಾರಸ್ವಾಮಿ ರವರಿಗೆ ಸೋಲನ್ನು ಕಾಣಿಸಲು ಸತತ ಪ್ರಯತ್ನವನ್ನು ನಡೆಸುತ್ತಿರುವ ಸುಮಲತಾ ರವರಿಗೆ ಭಾರಿ ಜನ ಬೆಂಬಲ ಕೇಳಿ ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಅದರಂತೆ ಇಂದು ಸುಮಲತಾ ರವರಿಗೆ ಮತ್ತೊಂದು ಆನೆ ಬಲ ಬಂದಂತಾಗಿದೆ.. ಚುನಾವಣೆಗೆ ಮುನ್ನವೇ ಮೊದಲ ಮತ ಸುಮಲತಾ ರವರಿಗೆ ದಕ್ಕಿದೆ.. ತಮಗೆಲ್ಲರಿಗೂ ತಿಳಿದಿರುವ ಹಾಗೆ ಲೋಕಸಭಾ ಚುನಾವಣೆ ಇರುವುದರಿಂದ ಗಡಿಯಲ್ಲಿ ದೇಶದ ರಕ್ಷಣೆ ಮಾಡುವ ಯೋಧರು ಚುನಾವಣಾ ಸಮಯದಲ್ಲಿ ಶಾಂತಿ ಸ್ಥಾಪಿಸಿ ಅಕ್ರಮಗಳನ್ನು ತಡೆಗಟ್ಟಲು ರಕ್ಷಣಾ ವಿಭಾಗದಲ್ಲಿ ಕಾರ್ಯ ನಿರ್ವಹಿಸಿರುತ್ತಾರೆ. ಅದೇ ಕಾರಣವಾಗಿ ಯುಗಾದಿ ಹಬ್ಬದ ದಿನದಂದು ದೇಶದ ಹಲವೆಡೆ ಯೋಧರಿಗೆ ಮತದಾನದ ಹಕ್ಕು ನೀಡಲಾಗಿತ್ತು, ಇದೇ ಸಮಯದಲ್ಲಿ ಜಿದ್ದಾಜಿದ್ದಿನ ಕಣವಾದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿನ ಯೋಧ ಯುಗಾದಿ ಹಬ್ಬದ ದಿನದಂದು ಮತ ಚಲಾಯಿಸಿದ್ದಾರೆ.

ನಮ್ಮ ದೇಶ ಕಾಯುವ ಯೋಧ ಮಂಡ್ಯ ಜಿಲ್ಲೆಯ ನಾಯಕ್ ರವರು ಯುಗಾದಿ ಹಬ್ಬದ ದಿನ ನಾನು ಸುಮಲತಾ ರವರಿಗೆ ಮತದಾನ ಮಾಡುತ್ತಿದ್ದೇನೆ, ದಯವಿಟ್ಟು ಮಂಡ್ಯದ ಜನತೆ ಸುಮಲತಾ ರವರಿಗೆ ಮತ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಮಂಡ್ಯ ರೈತರ ಕಷ್ಟ ಸಂಪೂರ್ಣವಾಗಿ ಬಗೆಹರಿಯಬೇಕು, ಸೈನಿಕರ ಕುಟುಂಬಕ್ಕೆ ಒಳ್ಳೆಯದು ಆಗಬೇಕು, ರೈತರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಲು ಸುಮಲತಾ ರವರಿಗೆ ಮಾತ್ರ ಸಾಧ್ಯವಾಗುತ್ತದೆ ಎಂದು ನಾಯಕ್ ಅವರು ತಿಳಿಸಿದ್ದಾರೆ. ಇದನ್ನು ಸೋಷಿಯಲ್ ಮಿಡೀಯಾದಲ್ಲಿ ನೋಡಿದ ಸುಮಲತಾ ಅಂಬರೀಶ್ ಪ್ರತಿಕ್ರಿಯಿಸಿದ್ದಾರೆ. ನಿಮ್ಮಿಂದಲೇ ನಾವು.. ನಿಮ್ಮ ಆಸೆಯನ್ನು ಮಂಡ್ಯ ಜನತೆ ನನಸು ಮಾಡುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ. ಒಟ್ಟಾರೆಯಾಗಿ ಸುಮಲತಾ ಅವರಿಗೆ ಇದರಿಂದ ಗೆಲುವಿನ ಹುಮ್ಮಸ್ಸು ಮತ್ತಷ್ಟು ಹೆಚ್ಚಾಗಿದೆ.. ಸ್ಟಾರ್ಸ್ ಗಳು ಕೂಡ ಸುಮಲತಾ ಅವರ ಗೆಲುವುಗೆ ಟೊಂಕ ಕಟ್ಟಿ ನಿಂತಿದ್ದಾರೆ. ಮಂಡ್ಯ ಜನತೆಯ ಒಲವು ಯಾರ ಕಡೆ ಇದೆ ಅನ್ನೋದನ್ನ ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments