ಜೆಡಿಎಸ್ ಗೆ ಬಿಗ್ ಶಾಕ್…!! ಜೆಡಿಎಸ್ ಅಧ್ಯಕ್ಷ ಮದನ್ ಸೇರಿದಂತೆ 200 ಕ್ಕೂ ಹೆಚ್ಚು ಪದಾಧಿಕಾರಿಗಳು ಬಿಜೆಪಿ ಗೆ..!!

08 Apr 2019 1:36 PM | Politics
5269 Report

ಲೋಕಸಭಾ ಚುನಾವಣೆಯು ಹತ್ತಿರ ಬರುತ್ತಿದ್ದಂತೆ  ಸಾಕಷ್ಟು ಶಾಸಕರು, ನಾಯಕರು ಪಕ್ಷ ಬಿಟ್ಟು ಪಕ್ಷಕ್ಕೆ ಹಾರುತ್ತಿದ್ದಾರೆ. ಇದೀಗ ಜೆಡಿಎಸ್ ನ ಶಿವಮೊಗ್ಗ ಲೋಕಸಭಾ ಅಖಾಡದಲ್ಲಿಯೂ ಕೂಡ ಇದೆ ಆಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪಗೆ ಬಿಗ್ ಶಾಕ್ ಆಗಿದ್ದು, ತೀರ್ಥಹಳ್ಳಿ ತಾಲೂಕು ಜೆಡಿಎಸ್ ಅಧ್ಯಕ್ಷ ಮದನ್ ಹಾಗೂ 200 ಕ್ಕೂ ಹೆಚ್ಚು ಪದಾಧಿಕಾರಿಗಳು ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡಿ ಬಿಜೆಪಿ ಸೇರಲು ಮುಂದಾಗಿದ್ದಾರೆ.

ಈಗಾಗಲೇ ಜೆಡಿಎಸ್ ತೀರ್ಥಹಳ್ಳಿ ತಾಲೂಕು ಅಧ್ಯಕ್ಷ ಮದನ್ ಹಾಗೂ ಇನ್ನಿತರ ಪದಾಧಿಕಾರಿಗಳು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಇಂದು ಬಿಜೆಪಿ ಪ್ರಾಥಮಿಕ ಸದಸ್ಯತ್ವನ್ನು ಮದನ್ ಅವರು ಸ್ವೀಕರಿಸಿದ್ದು, ಬುಧವಾರ 200 ಕ್ಕೂ ಹೆಚ್ಚು ಪದಾಧಿಕಾರಿಗಳ ಸಹಿತ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾಹಿತಿ ದೊರೆತಿದೆ.ಸದ್ಯ ಲೋಕಸಭೆ ಚುನಾವಣೆಯ ಹೊತ್ತಲ್ಲೇ ಜೆಡಿಎಸ್ ನಾಯಕರು ಈ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಕ್ಷೇತ್ರದಲ್ಲಿ ಪಕ್ಷಕ್ಕೆ ಬಾರಿ ಪಟ್ಟು ಬೀಳಲಿದೆ. ಚುನಾವಣೆಗೆ ಬೆಂಬಲಿಸಬೇಕಾದ ನಾಯಕರೇ ಪಕ್ಷ  ಬಿಟ್ಟಿರುವುದು ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪಗೆ ಭಾರೀ ಶಾಕ್ ನೀಡಿದೆ. ಒಟ್ಟಾರೆಯಾಗಿ ಶುವಮೊಗ್ಗ ಅಖಾಡವು ಕೂಡ ತೀವ್ರ ಸಂಕಷ್ಟ ಪಡುವಂತೆ ಆಗಿದೆ.. ಈಗಾಗಲೇ ಮಂಡ್ಯದಲ್ಲಿ ಸೋಲಿನ ಭಯ ಕಾಡುತ್ತಿರುವ ದೋಸ್ತಿಗೆ ಶಿವಮೊಗ್ಗ ಅಖಾಡ ತಲೆ ನೋವಾಗಿ ಪರಿಣಮಿಸುತ್ತಿದೆ. ಲೋಕಸಭಾ ಚುನಾವಣೇಯ ಫಲಿತಾಂಶ ಹೊರಬಂದ ಮೇಲೆಯೇ ಎಲ್ಲದಕ್ಕೂ ಕೂಡ ಉತ್ತರ ಸಿಗಲಿದೆ.

Edited By

Manjula M

Reported By

Manjula M

Comments