ಅಯ್ಯೋ..ಸುಮಲತಾ ಬೆಂಬಲಿಗರು ಹೀಗ್ ಮಾಡೋದಾ…!! ನಿಖಿಲ್ ಕುಮಾರಸ್ವಾಮಿ ಆಸ್ಪತ್ರೆಗೆ ಹೋಗಿದ್ಯಾಕೆ..?

08 Apr 2019 8:48 AM | Politics
1330 Report

ಮಂಡ್ಯದ ಪಕ್ಷೇತರ ಅಭ್ಯರ್ಥಿಯಾಗಿ ಈಗಾಗಲೇ ಸುಮಲತಾ ಅಖಾಡಕ್ಕೆ ಇಳಿದಿದ್ದಾರೆ. ಸುಮಲತಾ ಪರ ಸ್ಯಾಂಡಲ್ ವುಡ್ ನ ಸ್ಟಾರ್ಸ್ ಗಳೆ ಅಖಾಡಕ್ಕೆ ಇಳಿದು ಮತಬೇಟೆ ಮಾಡುತ್ತಿದ್ದಾರೆ. ಸ್ಟಾರ್ಸ್ ಗಳು ಅಖಾಡಕ್ಕೆ ಇಳಿದಿರುವುದರಿಂದ ಸುಮಲತಾ ಗೆಲುವು ಪಕ್ಕಾ ಎಂದು ಹೇಳಲಾಗುತ್ತಿದೆ.. ಒಂದು ಕಡೆ ರಾಜಕೀಯ ನಾಯಕರು ದೋಸ್ತಿ ಅಭ್ಯರ್ಥಿಯಾದ ನಿಖಿಲ್ ಗೆಲುವಿಗಾಗಿ ಟೊಂಕಕಟ್ಟಿ ನಿಂತಿದ್ದಾರೆ. ಮತ್ತೊಂದು ಕಡೆ ಸುಮಲತಾ ಅವರನ್ನು ಗೆಲ್ಲಿಸಲೇ ಬೇಕು ಎಂದು ಸ್ಯಾಂಡಲ್ ವುಡ್ ಸ್ಟಾರ್ಸ್ ಗಳು ಅಂಬಿ ಅಭಿಮಾನಿಗಳು ನಿಂತಿದ್ದಾರೆ. ಇತ್ತಿಚಿಗಷ್ಟೆ ಸುಮಲತಾ ನಾನು ಬಿಜೆಪಿ ಗೆ ಹೋಗುವುದಿಲ್ಲ ಎಂಬ ಮಾತನ್ನು ಹೇಳಿದ್ದರು… ಈ ಮಾತನ್ನು ಕೇಳಿದ ಬಿಎಸ್ ವೈ ತಲೆ ಮೇಲೆ ಕೈ ಹಿಟ್ಟು ಕೊಳ್ಳುವಂತೆ ಆಯಿತು.

ಇದೀಗ ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಇದೀಗ ದ್ವೇಷದ ರಾಜಕೀಯ ಪ್ರಾರಂಭವಾಗಿದೆ. .ಮದ್ದೂರು ತಾಲೂಕಿನ ಗುರುದೇವರಹಳ್ಳಿಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದಿದ್ದು, ಸುಮಲತಾ ಬೆಂಬಲಿಗರು ಹಾಗೂ ಜೆಡಿಎಸ್ ಕಾರ್ಯಕರ್ತರು ಹೊಡೆದಾಡಿ ಜೆಡಿಎಸ್ ನ ಮೂವರು ಕಾರ್ಯಕರ್ತರು ಆಸ್ಪತ್ರೆಗೆ ಸೇರಿದ್ದಾರೆ. ಜೆಡಿಎಸ್ ನ ಕಾರ್ತಿಕ್, ಅನಿಲ್ ಪಾಪಣ್ಣ ಮೇಲೆ ಸುಮಲತಾ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವಿಷಯ ತಿಳಿದು ಭಾನುವಾರ ರಾತ್ರಿ ಕೆಎಂ ದೊಡ್ಡಿ ಆಸ್ಪತ್ರೆಗೆ ನಿಖಿಲ್ ಭೇಟಿ ನೀಡಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಕೆಎಂ ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟಿನಲ್ಲಿ ಲೋಕಸಭಾ ಚುನಾವಣೆ ಮುಗಿಯುವುದರಲ್ಲಿ ಎಷ್ಟು ಗಲಾಟೆಗಳು ಆಗುತ್ತವೋ, ಎಷ್ಟು ಜನರು ಆಸ್ಪತ್ರೆ ಸೇರುತ್ತಾರೋ ಗೊತ್ತಿಲ್ಲ..

Edited By

Manjula M

Reported By

Manjula M

Comments