ನಿಖಿಲ್ ಗೆಲುವಿಗಾಗಿ ಸಿಎಂ ಕುಮಾರಸ್ವಾಮಿಯ ಹೊಸ ಮಾಸ್ಟರ್ ಫ್ಲ್ಯಾನ್..!! ಏನ್ ಗೊತ್ತಾ..?

06 Apr 2019 7:16 PM | Politics
6311 Report

ಈಗಾಗಲೇ ಲೋಕಸಭಾ ಚುನಾವಣೆಯು ದಿನದಿಂದ ದಿನಕ್ಕೆ ರಂಗೇರುತ್ತಿದೆ..ಅದರಲ್ಲೂ ಮಂಡ್ಯ ಅಖಾಡ ಮಾತ್ರ ದಿನದಿಂದ ದಿನಕ್ಕೂ ಹೊಸ ಸುದ್ದಿಯೊಂದಿಗೆ ಸುದ್ದಿಯಾಗುತ್ತಲೇ ಇದೆ..  ಒಂದು ಕಡೆ ಸುಮಲತಾ ಆದರೆ ಮತ್ತೊಂದು ಕಡೆ ನಿಖಿಲ್ ಅಖಾಡಕ್ಕೆ ಇಳಿದು ಭರ್ಜರಿ ಕ್ಯಾಂಪೇನ್ ಶುರು ಮಾಡಿಕೊಂಡಿದ್ದಾರೆ.. ಲೋಕಸಭಾ ಚುನಾವಣೆಯು ಹತ್ತಿರ ಬರುತ್ತಿದ್ದಂತೆ ನಿಖಿಲ್ ಗೆಲುವಿಗಾಗಿ ಸಿಎಂ ಕುಮಾರಸ್ವಾಮಿ ಟೊಂಕ ಕಟ್ಟಿ ನಿಂತಿದ್ಧಾರೆ.

ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಜೆಡಿಎಸ್ - ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪುತ್ರ ನಿಖಿಲ್ ಕುಮಾರ್ ಗೆಲುವಿಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೊಸ ಪ್ಲಾನ್  ಎಣಿದಿದ್ದಾರೆ. ಸೋಮವಾರದ ಬಳಿಕ ಮಂಡ್ಯ ಲೋಕಸಭೆ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಮಾಡಲಿದ್ದು, ನಿಖಿಲ್ ಪ್ರಚಾರ ಮಾಡಿರುವ ಗ್ರಾಮಗಳಲ್ಲಿ ಮತ್ತೆ ಪ್ರಚಾರ ನಡೆಸಲಿದ್ದಾರೆ. ಸುಮಲತಾ ಅಲೆ ಇರುವ ಜಾಗಗಳಲ್ಲಿ ಹೆಚ್ಚು ಪ್ರಚಾರ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.  ಈಗಾಗಲೇ, ಎಲ್ಲಾ ಶಾಸಕರಿಗೂ ಬೂತ್ ಮಟ್ಟದಲ್ಲಿ ಕೆಲಸ ಮಾಡಲು ಸೂಚನೆ ನೀಡಲಾಗಿದೆ. ಸುಮಲತಾ ಅವರ ಕುರಿತಾಗಿ ಯಾವುದೇ ರೀತಿಯ ವಿವಾದಿತ ಹೇಳಿಕೆ ನೀಡದಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಒಟ್ಟಾರೆಯಾಗಿ ಸಿಎಂ ಕುಮಾರಸ್ವಾಮಿಯವರು ಮಗನ ಗೆಲುವಿಗಾಗಿ ಟೊಂಕ ಕಟ್ಟಿ ನಿಂತಿದ್ದಾರೆ. ಮಂಡ್ಯ ಜನತೆಯ ಒಲವು ಸುಮಲತಾ ಕಡೆಯೂ ಅಥವಾ ನಿಖಿಲ್ ಕುಮಾರಸ್ವಾಮಿಯ ಮೇಲೊ ಗೊತ್ತಿಲ್ಲ.

 

Edited By

Manjula M

Reported By

Manjula M

Comments